ಲೋಕೇಶ್ ದೇವಾಡಿಗ

Update: 2021-01-27 17:41 GMT

ಮಂಗಳೂರು, ಜ.27: ಪದವಿನಂಗಡಿ ಬಳಿಯ ಬೊಲ್ಪುಗುಡ್ಡೆ ನಿವಾಸಿ ಲೋಕೇಶ್ ದೇವಾಡಿಗ (85) ಬುಧವಾರ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಇವರು ಬೊಲ್ಪುಗುಡ್ಡೆಯಲ್ಲಿ 35 ವರ್ಷಗಳಿಂದ ದಿನಸಿ ಅಂಗಡಿ ನಡೆಸಿದ್ದರು. ಕರ್ನಾಟಕ ರಾಜ್ಯ ದೇವಾಡಿಗರ ಸಂಘದ ಮಂಗಳೂರು ಶಾಖೆಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ, ಕಾವೂರು ವ್ಯವಸಾಯ ಸೇವಾ ಸಂಘದ ಸದಸ್ಯರಾಗಿ ಹಾಗೂ ಬೊಲ್ಪುಗುಡ್ಡೆ ಮಹಾಲಿಂಗೇಶ್ವರ ದೇವರಕಟ್ಟೆಯ ಸಲಹಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ