×
Ad

ನಿಶ್ಚಯವಾಗಿದ್ದ ವಿವಾಹ ಏಕಾಏಕಿ ರದ್ದು: ರೈಲಿಗೆ ತಲೆಕೊಟ್ಟು ಯುವಕ ಆತ್ಮಹತ್ಯೆ

Update: 2021-01-31 20:05 IST

ಬೆಂಗಳೂರು, ಜ.31: ನಿಶ್ಚಯವಾಗಿದ್ದ ವಿವಾಹ ಏಕಾಏಕಿ ರದ್ದು ಮಾಡಿದ ಕಾರಣ ನೊಂದು ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಆಂಧ್ರದ ಅನಂತಪುರ ಜಿಲ್ಲೆಯ ಧರ್ಮಾವರಂ ತಾಲೂಕಿನ ಯರಗುಂಟಪಲ್ಲಿ ನಿವಾಸಿ ಹರಿ(28) ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಎಂದು ಪೊಲೀಸರು ಗುರುತಿಸಿದ್ದಾರೆ.

ಇತ್ತೀಚಿಗೆ ಬೆಂಗಳೂರಿನ ಯುವತಿವೊಂದಿಗೆ ಹರಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ, ಏಕಾಏಕಿ ಯುವತಿ ಕುಟುಂಬದವರು ಮದುವೆ ಬೇಡವೆಂದು ಹೇಳಿದ್ದಾರೆ.ಇದರಿಂದ ನೊಂದು ಶನಿವಾರ ಸಂಜೆ ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News