×
Ad

ಬೆಂಗಳೂರಿನಲ್ಲಿ ಸಕ್ಷಮ್ ಸೈಕ್ಲೋಥಾನ್-2021ಕ್ಕೆ ಚಾಲನೆ

Update: 2021-01-31 22:57 IST

ಬೆಂಗಳೂರು, ಜ.31: ಇಂಧನ ಸಂರಕ್ಷಣೆ, ಪರಿಸರ ರಕ್ಷಣೆ ಹಾಗೂ ಕಡಿಮೆ ಅಂತರಗಳಿಗೆ ಸೈಕಲ್ ಗಳನ್ನು ಬಳಸುವಂತೆ ಉತ್ತೇಜಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಕ್ಷಮ್ ಸೈಕ್ಲೋಥಾನ್-2021ಕ್ಕೆ ರವಿವಾರ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಭಾಸ್ಕರ್ ರಾವ್, ಸರಕಾರದ ಯುವ ಸಬಲೀಕರಣ ಹಾಗೂ ಕ್ರೀಡೆ ಇದರ ಕಮಿಷನರ್ ಕೆ. ಶ‍್ರೀನಿವಾಸ್ ಹಾಗೂ ಗೈಲ್ ನ ಕಾರ್ಯನಿರ್ವಾಹಕ ನಿರ್ದೇಶಕ(ದಕ್ಷಿಣ ವಲಯ) ಪಿ. ಮುರುಗೇಶನ್ ಅವರ ಜೊತೆಗೂಡಿ ಬೆಂಗಳೂರು ಆವೃತ್ತಿಯ ಸೈಕ್ಲೋಥಾನ್ ಗೆ ಚಾಲನೆ ನೀಡಿದರು.

ಸೈಕ್ಲೋಥಾನ್ ನಲ್ಲಿ 500ಕ್ಕೂ ಅಧಿಕ ಸೈಕಲಿಸ್ಟ್ ಗಳು ಭಾಗವಹಿಸಿದ್ದು, ಕಬ್ಬನ್ ಪಾರ್ಕ್ ಸುತ್ತ 5 ಕಿ.ಮೀ. ದೂರ ಸೈಕಲನ್ನು ಚಲಾಯಿಸಿ ಕಂಠೀರವ ಸ್ಟೇಡಿಯಂಗೆ ಬಂದರು. 

ಸೈಕ್ಲೋಥಾನ್ ಗೆ ಚಾಲನೆ ನೀಡುವ ಮೊದಲು ಮುಖ್ಯ ಅತಿಥಿ ರವಿಕುಮಾರ್ ಅವರು ಸ್ಪರ್ಧಾಗಳುಗಳಿಗೆ ಕನ್ನಡ ಹಾಗೂ ಇಂಗ್ಲಿಷ್ ನಲ್ಲಿ ಪ್ರತಿಜ್ಞಾ ವಿಧಿ ಬೋಧಿಸಿದರು.

ಜಾಗೃತಿ ಅಭಿಯಾನದ ಭಾಗವಾಗಿ ಗೈಲ್ ಸಂಸ್ಥೆ ಸೈಕ್ಲೋಥಾನ್ ಅನ್ನು ಆಯೋಜಿಸಿತ್ತು. ಸಕ್ಷಮ್ 2021 ಕೇಂದ್ರ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಸಚಿವಾಲಯದಡಿ ಪೆಟ್ರೋಲಿಯಂ ಕನ್ಸರ್ವೇಶನ್ ರಿಸರ್ಚ್ ಅಸೋಸಿಯೇಶನ್ ನ ಉಪಕ್ರಮವಾಗಿದೆ. ಇಂಧನ ಸಂರಕ್ಷಣೆ, ಪರಿಸರ ರಕ್ಷಣೆ ಹಾಗೂ ಕಡಿಮೆ ಅಂತರಗಳಿಗೆ ಸೈಕಲ್ ಗಳನ್ನು ಬಳಸುವಂತೆ ಉತ್ತೇಜಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದು ಈ ಸೈಕ್ಲೋಥಾನ್ ನ ಉದ್ದೇಶವಾಗಿದೆ. ಇದು ಇಂಧನವನ್ನು ಉಳಿಸುವುದಲ್ಲದೆ ಸ್ವಚ್ಛ, ಹಸಿರಿನ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ನೆರವಾಗಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಪಿ.ರವಿಕುಮಾರ್, ನಡಿಗೆ ಅಥವಾ ಸೈಕಲಿಂಗ್, ಸಾರ್ವಜನಿಕ ಸಾರಿಗೆ ಬಳಕೆಯ ಮೂಲಕ ವ್ಯಕ್ತಿಯೊಬ್ಬ ತೈಲ ಹಾಗೂ ಅನಿಲ ಸಂರಕ್ಷಣೆಯಲ್ಲಿ ಮಹತ್ವದ ಕೊಡುಗೆ ನೀಡಬಹುದು ಎಂದರು.

ಉತ್ತಮ ಪರಿಸರಕ್ಕಾಗಿ ಮನೆಯಲ್ಲಿ, ವಾಹನಗಳಿಗೆ, ವಾಣಿಜ್ಯ ಹಾಗೂ ಕೈಗಾರಿಕೆಗಳಿಗೆ ನೈಸರ್ಗಿಕ ಅನಿಲಗಳನ್ನು ಬಳಸಬೇಕೆಂದು ರಾಜ್ಯದ ಜನತೆಗೆ ಮುರುಗೇಶನ್ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News