×
Ad

ಖಾಸಗಿ ಆರೋಗ್ಯ ಕ್ಷೇತ್ರವು ಕೈಗೆಟುಕುವ ದರದಲ್ಲಿ ಸೇವೆ ಒದಗಿಸಲಿ: ಮುಖ್ಯಮಂತ್ರಿ ಯಡಿಯೂರಪ್ಪ

Update: 2021-01-31 23:23 IST

ಬೆಂಗಳೂರು, ಜ.31: ಕೋವಿಡ್ ಆಂತಕದ ಸಮಯದಲ್ಲಿ ಖಾಸಗಿ ಆರೋಗ್ಯ ಕ್ಷೇತ್ರವು ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ಅಗತ್ಯವೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಿಸಿದ್ದಾರೆ.

ರವಿವಾರ ಇಲ್ಲಿನ ಮಾಗಡಿ ರಸ್ತೆ ಚಿಕ್ಕಗೊಲ್ಲರಹಟ್ಟಿಯಲ್ಲಿ ನೂತನವಾಗಿ ಪ್ರಾರಂಭಿಸಲಾಗಿರುವ ಶ್ರೀಮತಿ. ಜಯದೇವಿ ಮೆಮೊರಿಯಲ್ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದ ಅವರು, ಸಾರ್ವಜನಿಕ ಆರೋಗ್ಯ ಕ್ಷೇತ್ರದೊಂದಿಗೆ ಸಕಾರಾತ್ಮಕ ಸಹಯೋಗವನ್ನು ನೀಡುವಲ್ಲಿ ಜಯದೇವಿ ಮೆಮೋರಿಯಲ್ ಆಸ್ಪತ್ರೆಯು ಪ್ರಮುಖ ಪಾತ್ರ ವಹಿಸಲು ಚಿಂತನೆ ನಡೆಸಿರುವುದು ಪ್ರಶಂಸನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶ್ರೀಮತಿ ಜಯದೇವಿ ಮೆಮೋರಿಯಲ್ ಆಸ್ಪತ್ರೆಯು ಸಾಮಾನ್ಯ ಔಷಧಿ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಸ್ತ್ರ, ಮಕ್ಕಳ ಆರೋಗ್ಯ ಮತ್ತು ಆಘಾತ ಮತ್ತು ಪುನರರಚನೆ ಶಸ್ತ್ರ ಚಿಕಿತ್ಸೆ ಸೌಲಭ್ಯಗಳನ್ನು ಒಳಗೊಂಡಿದೆ. ಇವೇ ಅಲ್ಲದೆ ದಂತ ವಿಜ್ಞಾನ, ನರಶಸ್ತ್ರ ಚಿಕಿತ್ಸೆ ಮತ್ತು ಫಿಸಿಯೋಥೆರಫಿ ಸೌಲಭ್ಯಗಳನ್ನೂ ಒಳಗೊಂಡಿದೆ ಎಂದು ಡಾ.ಅರ್ಜುನ್ ಎಸ್.ಪ್ರಕಾಶ್ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News