​ಅಧಿಕಾರ ತೊರೆಯುವಂತೆ ಮ್ಯಾನ್ಮಾರ್ ಮಿಲಿಟರಿಗೆ ಅಮೆರಿಕಾ ಅಧ್ಯಕ್ಷ ಬೈಡನ್ ಆಗ್ರಹ

Update: 2021-02-02 07:18 GMT

ವಾಷಿಂಗ್ಟನ್,ಫೆ.02: ಮ್ಯಾನ್ಮಾರ್ ನಲ್ಲಿ ಕ್ಷಿಪ್ರ ಕ್ರಾಂತಿಯ ಮೂಲಕ ಅಧಿಕಾರಕ್ಕೇರಿರುವ ಅಲ್ಲಿನ ಮಿಲಿಟರಿಗೆ ಅಧಿಕಾರ ತೊರೆಯುವಂತೆ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಆಗ್ರಹಿಸಿದ್ದಾರೆ.  ಮ್ಯಾನ್ಮಾರ್ ಪ್ರಜಾಪ್ರಭುತ್ವದೆಡೆಗೆ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಈ ಹಿಂದೆ ತೆರವುಗೊಳಿಸಲಾಗಿದ್ದ ನಿರ್ಬಂಧಗಳನ್ನು ಮರುಹೇರುವ ಕುರಿತಂತೆ ಪರಿಗಣಿಸಲೂ ಅವರು ಆದೇಶಿಸಿದ್ದಾರೆ.

"ಮ್ಯಾನ್ಮಾರ್ ನ ಮಿಲಿಟರಿ ತಾನು ಕೈವಶ ಮಾಡಿಕೊಂಡಿರುವ ಅಧಿಕಾರವನ್ನು ತ್ಯಜಿಸಲು ಒಕ್ಕೊರಲಿನಿಂದ ಆಗ್ರಹಿಸಲು ಅಂತಾರಾಷ್ಟ್ರೀಯ ಸಮುದಾಯ ಒಂದಾಗಬೇಕು" ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

"ಬರ್ಮಾ ಕಳೆದೊಂದು ದಶಕದಿಂದ ಪ್ರಜಾಪ್ರಭುತ್ವದತ್ತ ಸಾಗುತ್ತಿದೆ ಎಂಬುದನ್ನು ಗಮನಿಸಿ  ಅಮೆರಿಕಾ ನಿರ್ಬಂಧಗಳನ್ನು ತೆರವುಗೊಳಿಸಿತ್ತು," ಎಂದು ಮ್ಯಾನ್ಮಾರ್ ನ ಹಿಂದಿನ ಹೆಸರು ಉಲ್ಲೇಖಿಸಿ ಹೇಳಿದ ಬೈಡನ್ "ಆದರೆ ಈಗ  ಮತ್ತೆ ಹಿಂದಿನ  ಸ್ಥಿತಿಗೆ ಮರಳುತ್ತಿರುವುದನ್ನು ಗಮನಿಸಿದಾಗ ನಿರ್ಬಂಧಗಳ ಕುರಿತು ಮರುಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ" ಎಂದು ತಿಳಿಸಿದರು.

"ಪ್ರಜಾಪ್ರಭುತ್ವದ ಮೇಲೆ ದಾಳಿಯಾದಾಗಲೆಲ್ಲಾ ಅಮೆರಿಕಾ ಪ್ರಜಾಪ್ರಭುತ್ವಕ್ಕಾಗಿ ಎದ್ದು ನಿಲ್ಲಲಿದೆ" ಎಂದು ಬೈಡನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News