"ನಿಮ್ಮ ತಡೆಗೋಡೆ, ಮುಳ್ಳುಗಳಿಂದ ನಮ್ಮನ್ನು ತಡೆಯಲು ಸಾಧ್ಯವಿಲ್ಲ, ಗೂಂಡಾಗಳ ಮೂಲಕ ನಮ್ಮನ್ನು ಪ್ರಚೋದಿಸದಿರಿ"

Update: 2021-02-02 08:38 GMT

ಹೊಸದಿಲ್ಲಿ,ಫೆ.2: ಕೇಂದ್ರ ಸರಕಾರದ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ಕುರಿತಾದಂತೆ ರೈತರು ಪ್ರತಿಭಟನೆ ನಡೆಸುತ್ತಿದ್ದು, ಗಣರಾಜ್ಯೋತ್ಸವದ ಟ್ರಾಕ್ಟರ್ ರ್ಯಾಲಿಯ ಬಳಿಕ ಇದೀಗ ಇನ್ನಿತರ ರಾಜ್ಯಗಳ ರೈತರು ಕೂಡಾ ಪ್ರತಿಭಟನಾ ಸ್ಥಳಗಳಿಗೆ ಆಗಮಿಸಲು ಅಣಿಯಾಗುತ್ತಿದ್ದಾರೆ. ಇವರನ್ನು ತಡೆಯುವ ಸಲುವಾಗಿ ಸರಕಾರವು ಪೊಲೀಸರ ಮೂಲಕ ಬ್ಯಾರಿಕೇಡ್, ಬಸ್, ತಡೆಗೋಡೆ, ಮುಳ್ಳುಗಳು ಮತ್ತು ಮೊಳೆಗಳನ್ನು ಗಡಿಯುದ್ದಕ್ಕೂ ಅಳವಡಿಸುತ್ತಿದೆ. ಈ ಕುರಿತು ಇದೀಗ ಕಿಸಾನ್ ಏಕ್ತಾ ಮೋರ್ಚ ಆಕ್ರೋಶ ವ್ಯಕ್ತಪಡಿಸಿದೆ. 

ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಟ್ವಟರ್ ಖಾತೆಯಲ್ಲಿ "ತಡೆಗೋಡೆಗಳನ್ನು, ಮೊಳೆಗಳನ್ನು, ಮುಳ್ಳುಗಳನ್ನು ಸ್ಥಾಪಿಸುವ ಮೂಲಕ ನಮ್ಮನ್ನು ತಡೆಯಲು ನಿಮ್ಮಿಂದ ಸಾಧ್ಯವಿಲ್ಲ. ನಾವು ಶಾಂತಿಯುತವಾಗಿದ್ದೇವೆ. ಶಾಂತಿಯುತವಾಗಿಯೇ ಇರುತ್ತೇವೆ. ನಿಮ್ಮದೇ ಗೂಂಡಾಗಳನ್ನು ಛೂ ಬಿಡುವ ಮೂಲಕ ನಮ್ಮನ್ನು ಪ್ರಚೋದಿಸದಿರಿ" ಎಂದು ಸಂಘಟನೆಯು ಹೇಳಿಕೆ ನೀಡಿದೆ.

"ನೀವು ಶಾಂತಿಯುತವಾಗಿಯೇ ಪ್ರತಿಭಟನೆ ಮುಂದುವರಿಸಿ. ಯಾವುದೇ ಕಾರಣಕ್ಕೂ ಪ್ರಚೋದನೆಗೆ ಒಳಗಾಗದಿರಿ. ನಿಮ್ಮ ಪ್ರಚೋದನೆಯೇ ಅವರ ಅಸ್ತ್ರವಾಗಿದೆ. ಪ್ರತಿಭಟನೆಯು ಶಾಂತವಾಗಿಯೇ ಇರಲಿ" ಎಂದು ಬಳಕೆದಾರರೋರ್ವರು ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News