ಏರೋ ಇಂಡಿಯಾ ವೈಮಾನಿಕ ಪ್ರದರ್ಶನ: ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪರ್ಯಾಯ ಮಾರ್ಗ

Update: 2021-02-02 17:28 GMT

ಬೆಂಗಳೂರು, ಫೆ.2: ಯಲಹಂಕ ವಾಯುನೆಲೆಯಲ್ಲಿ ಫೆಬ್ರವರಿ 3ರಿಂದ 5ರವರೆಗೆ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನ ಆಯೋಜನೆಗೊಂಡಿರುವ ಹಿನ್ನೆಲೆಯಲ್ಲಿ ದೇಶ, ವಿದೇಶದ ಹಲವಾರು ಮಂದಿ ಗಣ್ಯ, ಅತೀ ಗಣ್ಯ ವ್ಯಕ್ತಿಗಳು ಭೇಟಿ ನೀಡಲಿದ್ದಾರೆ. ಅಲ್ಲದೆ, ಮಾರ್ಗಮಧ್ಯೆಯೆ ನಿಂತು ಸಾರ್ವಜನಿಕರು ವೈಮಾನಿಕ ಪ್ರದರ್ಶನವನ್ನು ವೀಕ್ಷಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಬೆಂಗಳೂರು ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಸಂಚರಿಸಲು ಅನುಕೂಲವಾಗುವಂತೆ ಬೆಂಗಳೂರು ಉತ್ತರ ವಿಭಾಗದ ಸಂಚಾರ ಪೊಲೀಸರು ಪರ್ಯಾಯ ಮಾರ್ಗ ವ್ಯವಸ್ಥೆಯನ್ನು ಮಾಡಿದ್ದಾರೆ.

ಮಾರ್ಗ-1: ಬೆಂಗಳೂರು ಪೂರ್ವ ಭಾಗದಲ್ಲಿನ ವರ್ತೂರು, ವೈಟ್ ಫೀಲ್ಡ್, ಕೆ.ಆರ್.ಪುರ, ಹಲಸೂರು, ಶಿವಾಜಿನಗರ, ಇಂದಿರಾನಗರ, ಬಾಣಸವಾಡಿ ಕಡೆಯಿಂದ ಬರುವ ವಾಹನಗಳು ಟಿನ್ ಫ್ಯಾಕ್ಟರಿ-ರಾಮಮೂರ್ತಿನಗರ-ಹೆಣ್ಣೂರು ಕ್ರಾಸ್ ಬಲ ತಿರುವು-ಹೆಣ್ಣೂರು ಮುಖ್ಯರಸ್ತೆ-ಬೈರತಿ ಕ್ರಾಸ್-ಹೊಸೂರು ಬಂಡೆ- ಚಾಗಲಹಟ್ಟಿ- ಬಾಗಲೂರು ಗುಂಡಪ್ಪ ಸರ್ಕಲ್ ಬಲ ತಿರುವು-ಬಾಗಲೂರು ಬಸ್ ನಿಲ್ದಾಣ ಎಡ ತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯ ರಸ್ತೆ-ಮೈಲನಹಳ್ಳಿ ಕ್ರಾಸ್-ಎಡ ತಿರುವು-ಬೇಗೂರು ಬ್ಯಾಕ್ ಗೇಟ್-ಬಲ ತಿರುವು-1ನೇ ಸರ್ಕಲ್-2ನೇ ಸರ್ಕಲ್ ಮೂಲಕ ಕೆಂಪೇಗೌಡ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಬೇಕು.

ಮಾರ್ಗ-2: ಬೆಂಗಳೂರು ದಕ್ಷಿಣ ಮತ್ತು ಕೇಂದ್ರ ಭಾಗದ ಎಲೆಕ್ಟ್ರಾನಿಕ್ ಸಿಟಿ, ಕೋರಮಂಗಲ, ಜಯನಗರ, ಜೆ.ಪಿ.ನಗರ, ಬನಶಂಕರಿ, ಬಸವನಗುಡಿ, ಮೆಜೆಸ್ಟಿಕ್, ಎಂ.ಜಿ.ರಸ್ತೆಯಿಂದ ಬರುವ ವಾಹನಗಳು ಬಸವೇಶ್ವರ ಸರ್ಕಲ್-ಮೇಕ್ರಿ ಸರ್ಕಲ್-ಎಡ ತಿರುವು-ಸದಾಶಿವನಗರ ಪೊಲೀಸ್ ಸ್ಟೇಷನ್-ಬಲ ತಿರುವು- ನ್ಯೂ ಬಿಇಎಲ್ ಸರ್ಕಲ್- ಕುವೆಂಪು ಸರ್ಕಲ್-ಬಲ ತಿರುವು- ಭದ್ರಪ್ಪ ಲೇಔಟ್-ಹೆಬ್ಬಾಳ ಸರ್ಕಲ್-ವೀರಣ್ಣಪಾಳ್ಯ-ನಾಗವಾರ ಜಂಕ್ಷನ್-ಎಡ ತಿರುವು-ಥಣಿಸಂದ್ರ ಮುಖ್ಯ ರಸ್ತೆ-ರೇವಾ ಕಾಲೇಜ್ ಜಂಕ್ಷನ್-ಬಲ ತಿರುವು-ಬಾಗಲೂರು ಮುಖ್ಯ ರಸ್ತೆ-ಬಾಗಲೂರು ಗುಂಡಪ್ಪ ಸರ್ಕಲ್ ಬಲ ತಿರುವು-ಬಾಗಲೂರು ಬಸ್ ನಿಲ್ದಾಣ-ಎಡ ತಿರುವು- ಬಂಡಿಕೊಡಿಗೇಹಳ್ಳಿ ಮುಖ್ಯರಸ್ತೆ-ಮೈಲನಹಳ್ಳಿ ಕ್ರಾಸ್-ಎಡ ತಿರುವು-ಬೇಗೂರು ಬ್ಯಾಕ್ ಗೇಟ್-ಬಲ ತಿರುವು-1ನೇ ಸರ್ಕಲ್-2ನೇ ಸರ್ಕಲ್ ಮೂಲಕ ವಿಮಾನ ನಿಲ್ದಾಣ ತಲುಪಬೇಕು.

ಮಾರ್ಗ-3: ಬೆಂಗಳೂರು ಪಶ್ಚಿಮ ಮತ್ತು ಉತ್ತರ ಭಾಗದ ಕೆಂಗೇರಿ, ವಿಜಯನಗರ, ಮೈಸೂರು ರಸ್ತೆ, ರಾಜಾಜಿ ನಗರ, ಮಲ್ಲೇಶ್ವರಂ, ಯಶವಂತಪುರ, ಪೀಣ್ಯದಿಂದ ಬರುವ ವಾಹನಗಳು ಗೊರಗುಂಟೆ ಪಾಳ್ಯ-ಬಿಇಎಲ್ ಜಂಕ್ಷನ್-ಎಡ ತಿರುವು-ಗಂಗಮ್ಮನ ಗುಡಿ ಸರ್ಕಲ್- ಎಂ.ಎಸ್.ಪಾಳ್ಯ-ಯಲಹಂಕ ಮದರ್ ಡೈರಿ ಜಂಕ್ಷನ್-ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್-ಎಡ ತಿರುವು-ನಾಗೇನಹಳ್ಳಿ ಗೇಟ್-ಸಿಂಗನಾಯಕನಹಳ್ಳಿ-ರಾಜಾನುಕುಂಟೆ-ಬಲ ತಿರುವು-ಎಂ.ವಿ.ಐ.ಟಿ ಜಂಕ್ಷನ್-ಎಡ ತಿರುವು-ವಿದ್ಯಾನಗರ ಕ್ರಾಸ್- ಚಿಕ್ಕಜಾಲ-ಸಾದಹಳ್ಳಿ ಗೇಟ್-ಏರ್ ಪೋರ್ಟ್ ಟೋಲ್- 1ನೇ ಸರ್ಕಲ್-2ನೇ ಸರ್ಕಲ್ ಮೂಲಕ ವಿಮಾನ ನಿಲ್ದಾಣ ತಲುಪಬೇಕು ಎಂದು ಪೊಲೀಸರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News