ವಸತಿ ಸಮುಚ್ಚಯಗಳ ನೋಂದಣಿಗೆ ಸೂಚನೆ
Update: 2021-02-05 22:49 IST
ಉಡುಪಿ, ಫೆ.5: ಉಡುಪಿ ಜಿಲ್ಲೆಯಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ವಸತಿ ಸಮುಚ್ಚಯಗಳು ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯದ ಅಂತರ್ಜಾಲ -nidhi.nic.in-ನಲ್ಲಿ ಹಾಗೂ ಸೆಲ್ಫ್ ಸರ್ಟಿಫಿಕೇಷನ್‌ಗಾಗಿ -Saathi.qcin.org -ನಲ್ಲಿ ನೋಂದಣಿ ಮಾಡಿಕೊಂಡು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರಿಗೆ ಜಿಲ್ಲೆಯ ವಸತಿ ಸಮುಚ್ಚಯಗಳ ಮಾಹಿತಿ ಲ್ಯವಾಗಿ ಉಡುಪಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವಂತೆ ಎಲ್ಲಾ ಹೋಟೆಲ್, ಲಾಡ್ಜಿಂಗ್, ರೆಸಾರ್ಟ್ ಮುಂತಾದ ವಸತಿ ಸಮುಚ್ಚಯಗಳ ಮಾಲಕರಿಗೆ ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಉಡುಪಿ ಮೊಬೈಲ್ ನಂ: 9480201994 ಹಾಗೂ ದೂ. ಸಂಖ್ಯೆ: 0820-2574868ನ್ನು ಸಂಪರ್ಕಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ್ ಬಿ. ಕಮರೂರಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.