ಜಾತಿ ಆಧಾರದಲ್ಲಿ ಹೋರಾಟ ಒಡೆಯಲು ಅವರು ಯತ್ನಿಸಬಹುದು: ರೈತರನ್ನು ಎಚ್ಚರಿಸಿದ ರಾಕೇಶ್ ಟಿಕಾಯತ್

Update: 2021-02-08 10:42 GMT

ಹೊಸದಿಲ್ಲಿ: ರೈತರ ಹೋರಾಟವನ್ನು ಒಡೆಯಲು ಅವರು ಜಾತಿಯ ಅಸ್ತ್ರವನ್ನು ಬಳಸಬಹುದು ಎಂದು ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ ರೈತರನ್ನು ಎಚ್ಚರಿಸಿದ್ದಾರೆ.

ಹರ್ಯಾಣಾದ ಕಿತ್ಲಾನ ಟೋಲ್ ಪ್ಲಾಝಾ ಸಮೀಪ ರವಿವಾರ ನಡೆದ ಬೃಹತ್ ಕಿಸಾನ್ ಮಹಾಪಂಚಾಯತ್ ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

"ಈ ಹೋರಾಟ ಆರಂಭಗೊಂಡಾಗ ಅವರು ಪಂಜಾಬ್, ಹರ್ಯಾಣ, ಸರ್ದಾರ್‍ಗಳು, ಸರ್ದಾರ್ ಅಲ್ಲದವರು ಎಂದು ಹೇಳಿಕೊಂಡು ರೈತರಲ್ಲಿ ಭಿನ್ನಾಭಿಪ್ರಾಯ ಉಂಟು ಮಾಡಲು ಯತ್ನಿಸಿದ್ದರು. ಅವರು ವಿವಿಧ ಖಾಪ್‍ಗಳ ಆಧಾರದಲ್ಲೂ ನಿಮ್ಮ ಒಗ್ಗಟ್ಟಿಗೆ ಭಂಗವುಂಟು ಮಾಡಬಹುದು ಆದರೆ ನೀವು ಒಗ್ಗಟ್ಟನಿಂದಿರಬೇಕು. ಈ ರೀತಿಯ ಒಗ್ಗಟ್ಟನ್ನು ಬಲಪಡಿಸಬೇಕು,'' ಎಂದು ಅವರು ಹೇಳಿದರು.

"ಕೃಷಿ ಕಾಯಿದೆಗಳ ವಿರುದ್ಧ ಜಾಗೃತಿ ಮೂಡಿಸಲು ದೇಶಾದ್ಯಂತ ನಾವು ಸಂಚರಿಸುತ್ತೇವೆ, ಈ ಆಂದೋಲನ ಯಶಸ್ವಿಯಾಗದೇ ಇರದು, ಈ ಕಾನೂನುಗಳ ವಾಪಸಾತಿಯಾಗದೆ ನಾವು ಮನೆಗಳಿಗೆ ಹಿಂದಿರುಗುವುದಿಲ್ಲ,'' ಎಂದು ಅವರು ಪುನರುಚ್ಛರಿಸಿದರು.

ಚರ್ಖಿ ದಾದ್ರಿ-ಭಿವಾನಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಝಾ ಸಮೀಪ ನಡೆದ ಈ ಮಹಾಪಂಚಾಯತ್‍ನಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಟಿಯಾಯತ್ ಹೊರತಾಗಿ ರೈತ ನಾಯಕರಾದ ಬಲಬೀರ್ ಸಿಂಗ್ ರಾಜೇವಾಲ್ ಹಾಗೂ ಡಾ. ದರ್ಶನ್ ಪಾಲ್ ಕೂಡ ಸಭೆಯನ್ನುದ್ದೇಶಿಸಿ ಮಾತನಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News