ಖೋಡೇಸ್ ಗ್ರೂಪ್ ಕಾರ್ಖಾನೆ, ಮಾಲಕರ ಕಚೇರಿ, ಮನೆ ಮೇಲೆ ಐಟಿ ದಾಳಿ

Update: 2021-02-09 18:29 GMT

ಬೆಂಗಳೂರು, ಫೆ.9: ಪ್ರತಿಷ್ಠಿತ ಮದ್ಯತಯಾರಿಕಾ ಕಂಪೆನಿ ಖೋಡೇಸ್ ಗ್ರೂಪ್‍ನ ಕಾರ್ಖಾನೆಗಳು ಹಾಗೂ ಮಾಲಕರ ಕಚೇರಿ, ಮನೆಗಳ ಮೇಲೆ ಆದಾಯ ತೆರಿಗೆ(ಐಟಿ) ಇಲಾಖೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆ ಪತ್ರಗಳ ಪರಿಶೀಲನೆ ನಡೆಸಿದ್ದಾರೆ.

ಅತಿ ಹೆಚ್ಚು ಮದ್ಯ ಉತ್ಪಾದಿಸುವ ಖೋಡೇಸ್ ಗ್ರೂಪ್‍ನ 15ಕ್ಕೂ ಹೆಚ್ಚು ಕಾರ್ಖಾನೆಗಳು, ಮಾಲಕರ ಕಚೇರಿ ಮನೆ ಮೇಲೆ ಐಟಿ ಅಧಿಕಾರಿಗಳು ಏಕಕಾಲದಲ್ಲಿ ನಡೆಸಿದ್ದಾರೆ.

ಮಂಗಳವಾರ ನಗರದ ಶೇಷಾದ್ರಿ ರಸ್ತೆಯ ಖೋಡೇಸ್ ಗ್ರೂಪ್ ಮಾಲಕನ ಮನೆ, ಕಚೇರಿ, ಕೋಣನಕುಂಟೆಯ ಕಾರ್ಖಾನೆ ಸೇರಿ ಒಟ್ಟು 15 ಕಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸುತ್ತಿದ್ದಾರೆ.

ಖೋಡೇಸ್ ಗ್ರೂಪ್‍ನ ಮಾಲಕರ ಕಚೇರಿ, ಮನೆ ಕಾರ್ಖಾನೆಗಳು ಸೇರಿ 15 ಕಡೆಗಳಲ್ಲಿ ಐದಾರು ತಂಡಗಳಲ್ಲಿ ಬಂದ ಐಟಿ ಅಧಿಕಾರಿಗಳು ಮುಂಜಾನೆ 6ರಿಂದ ದಾಳಿ ನಡೆಸುತ್ತಿದ್ದು, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಹಿರಿಯ ಅಧಿಕಾರಿಗಳನ್ನು ವಿಚಾರಣೆ ನಡೆಸಿದ್ದಾರೆ.

ತೆರಿಗೆ ವಂಚನೆ ನಡೆಸಿರುವ ದೂರುಗಳ ಹಿನ್ನೆಲೆಯಲ್ಲಿ ಮಾಹಿತಿಯನ್ನು ಸಂಗ್ರಹಿಸಿ ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಪತ್ರಗಳ ಶೋಧ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News