ಡ್ರಗ್ಸ್ ಸಾಗಣೆ ಆರೋಪ: ರೌಡಿ ಶೀಟರ್ ಸೇರಿ ಆರು ಮಂದಿಯ ಬಂಧನ

Update: 2021-02-11 17:01 GMT

ಬೆಂಗಳೂರು, ಫೆ.11: ಲಕ್ಷಾಂತರ ರೂಪಾಯಿ ಮೌಲ್ಯದ ಡ್ರಗ್ಸ್ ಸಾಗಾಟ ಮಾಡುತ್ತಿದ್ದ ಮಂಗಳೂರಿನ ರೌಡಿಶೀಟರ್ ಸೇರಿ ಆರು ಮಂದಿ ಆರೋಪಿಗಳನ್ನು ಗುರುವಾರ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಮಂಗಳೂರಿನ ರೌಡಿಶೀಟರ್ ಅಸ್ಗರ್ ಅಲಿ, ದಿಲ್ ಮಯಾಗ್ರಥಿ, ಮೀನಾಬುದ್ದ ಮೊಗ್ರ, ಅನ್ವರ್ ಸಾದತ್, ಅಬ್ದುಲ್ ಲತೀಫ್ ಹಾಗೂ ಮುಹಮದ್ ಹನೀಫ್ ಎಂದು ಗುರುತಿಸಲಾಗಿದೆ.  

ಈ ಆರೋಪಿಗಳಿಂದ 35 ಲಕ್ಷ ಮೌಲ್ಯದ 4 ಕೆ.ಜಿ.ಚರಸ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಯುವಕರನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಡ್ರಗ್ಸ್ ಮಾರಾಟಕ್ಕೆ ಮುಂದಾಗಿದ್ದರು. ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ ಸಿಸಿಬಿ ಮಾದಕ ದ್ರವ್ಯ ವಿಭಾಗದ ಪೊಲೀಸರು ನಾಲ್ಕು ಮಂದಿ ದಂಧೆಕೋರರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದೆ.

ಬಂಧಿತ ಆರೋಪಿಗಳ ಪೈಕಿ ಅಸ್ಗರ್ ಅಲಿ ಮಂಗಳೂರು ಮೂಲದ ರೌಡಿಶೀಟರ್ ಆಗಿದ್ದು, ಈತನ ವಿರುದ್ದ ಅಪರಾಧ ಪ್ರಕರಣ ದಾಖಲಾಗಿವೆ. ಇತ್ತೀಚೆಗಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News