ದ್ವಿತೀಯ ಟೆಸ್ಟ್: ರನ್ ಖಾತೆ ತೆರೆಯುವ ಮೊದಲೇ ಭಾರತದ ಪ್ರಥಮ ವಿಕೆಟ್ ಪತನ

Update: 2021-02-13 05:18 GMT

ಚೆನ್ನೈ, ಫೆ.13: ಇಲ್ಲಿನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಭಾರತಕ್ಕೆ ಆರಂಭಿಕ ಆಘಾತ ಎದುರಾಗಿದೆ. ತಂಡದ ರನ್ ಖಾತೆ ತೆರೆಯುವ ಮೊದಲೇ ಪ್ರಥಮ ವಿಕೆಟ್ ಪತನಗೊಂಡಿದೆ.

ಪಂದ್ಯದ ದ್ವಿತೀಯ ಓವರ್ ನಲ್ಲಿ ಶುಭಮನ್ ಗಿಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಓಲಿ ಸ್ಟೋನ್ ಎಸೆದ ಪ್ರಥಮ ಓವರ್ ನ 3ನೇ ಎಸೆತದಲ್ಲಿ ಎಲ್ ಬಿಡಬ್ಲ್ಯು ಬಲೆಗೆ ಬಿದ್ದ ಗಿಲ್ ಪೆವಿಲಿಯನ್ ಸೇರಿದ್ದಾರೆ.

ಇತ್ತೀಚೆಗೆ ವರದಿ ಬಂದಾಗ 5 ಓವರ್ ಗಳಲ್ಲಿ 16 ರನ್ ಗಳಿಸಿರುವ ಭಾರತ ತಂಡ ಆರಂಭಿಕ ಆಘಾತದಿಂದ ಚೇತರಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ರೋಹಿತ್ ಶರ್ಮಾ(12) ಹಾಗೂ ಚೇತೇಶ್ವರ ಪೂಜಾರ(4) ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಈ ಮೊದಲು ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. 

ಚೆನ್ನೈನ ಎಂ. ಚಿದಂಬರಂ ಸ್ಟೇಡಿಯಂನಲ್ಲಿ ಉಭಯ ತಂಡಗಳು ಸರಣಿಯ ಎರಡನೇ ಪಂದ್ಯವಾಡುತ್ತಿದೆ. ಇಂಗ್ಲೆಂಡ್ ತಂಡ ಮೊದಲ ಪಂದ್ಯ ಗೆದ್ದಿದ್ದರೆ, ಟೀಂ ಇಂಡಿಯಾ ಈ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲಗೊಳಿಸಲು ಉತ್ಸುಕವಾಗಿದೆ

ಭಾರತ ತಂಡ ಮೂರು ಹಾಗೂ ಇಂಗ್ಲೆಂಡ್ ತಂಡ ನಾಲ್ಕು ಬದಲಾವಣೆಗಳೊಂದಿಗೆ ಕಣಕ್ಕಿಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News