ಜಮ್ಮು-ಕಾಶ್ಮೀರಕ್ಕೆ ಶೀಘ್ರವೇ ರಾಜ್ಯ ಸ್ಥಾನಮಾನ ನೀಡಲಾಗುವುದು: ಅಮಿತ್ ಶಾ

Update: 2021-02-13 11:16 GMT

ಹೊಸದಿಲ್ಲಿ: ಜಮ್ಮು-ಕಾಶ್ಮೀರ ಮರು ಸಂಘಟನೆ(ತಿದ್ದುಪಡಿ)ಮಸೂದೆ-2021ನ್ನು ತರುವುದು ಎಂದರೆ ಜಮ್ಮು-ಕಾಶ್ಮೀರ ರಾಜ್ಯ ಸ್ಥಾನಮಾನ ಪಡೆಯುವುದಿಲ್ಲ ಎಂದರ್ಥ ಎಂದು ಹಲವು ಸಂಸದರು ಹೇಳಿದ್ದಾರೆ. ನಾನು ಮಸೂದೆಯನ್ನು ಪ್ರಾಯೋಗಿಕವಾಗಿ ತಂದಿದ್ದೇನೆ. ನಾನು ಉದ್ದೇಶವನ್ನು ಸ್ಪಷ್ಟಪಡಿಸಿದ್ದೇನೆ. ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸಿಗುವುದಿಲ್ಲ ಎಂದು ಎಲ್ಲಿ ಬರೆಯಲಾಗಿದೆ. ನೀವು ಎಲ್ಲಿಂದ ತೀರ್ಮಾನಕ್ಕೆ ಬರುತ್ತಿದ್ದೀರಿ? ಜಮ್ಮು-ಕಾಶ್ಮೀರಕ್ಕೆ ಸೂಕ್ತ ಸಮಯದಲ್ಲಿ ಶೀಘ್ರವೇ ರಾಜ್ಯದ ಅಧಿಕಾರ ನೀಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಇಂದು ಲೋಕಸಭೆಯಲ್ಲಿ ಭರವಸೆ  ನೀಡಿದರು.

ನಾನು ಈ ಸದನದಲ್ಲಿ ಹೇಳಿದ್ದೇನೆ. ಮಸೂದೆಯು ಜಮ್ಮು-ಕಾಶ್ಮೀರದ ರಾಜ್ಯ ಸ್ಥಾನಮಾನಕ್ಕೆ ಧಕ್ಕೆ ತರುವುದಿಲ್ಲ ಎಂದು ಮತ್ತೊಮ್ಮೆ ಹೇಳುತ್ತೇನೆ. ಸರಿಯಾದ ಸಮಯಕ್ಕೆ ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡಲಾಗುವುದು ಎಂದು ಶಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News