×
Ad

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡಿಕೆಶಿ ಪುತ್ರಿ ಐಶ್ವರ್ಯಾ- ಸಿದ್ಧಾರ್ಥ ಹೆಗ್ಡೆ ಪುತ್ರ ಅಮರ್ಥ್ಯ

Update: 2021-02-14 11:20 IST

ಬೆಂಗಳೂರು, ಫೆ.14: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪುತ್ರಿ ಐಶ್ವರ್ಯಾ ಹಾಗೂ ಕೆಫೆ ಕಾಫಿ ಡೇ ಸಂಸ್ಥಾಪಕ ದಿವಂಗತ ಸಿದ್ಧಾರ್ಥ ಹೆಗ್ಡೆ ಅವರ ಪುತ್ರ ಅಮಥ್ರ್ಯ ಹೆಗ್ಡೆ ಅವರ ವಿವಾಹ ಸಮಾರಂಭವು ನಗರದ ವೈಟ್‍ಫೀಲ್ಡ್‍ನಲ್ಲಿರುವ ಐಷಾರಾಮಿ ಖಾಸಗಿ ಹೊಟೇಲ್‍ನಲ್ಲಿ ಶಾಸ್ತ್ರೋಕ್ತವಾಗಿ ರವಿವಾರ ನೆರವೇರಿತು.

ನವ ಜೋಡಿಗೆ ವಿವಿಧ ಮಠಗಳ ಮಠಾಧೀಶರು, ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ದಂಪತಿ, ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಧ್ಯಪ್ರದೇಶದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್, ನಟರಾದ ಪುನೀತ್ ರಾಜ್‍ಕುಮಾರ್ ದಂಪತಿ, ರಿತೇಶ್ ದೇಶ್‍ಮುಖ್ ದಂಪತಿ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ದಂಪತಿ, ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್, ಸಚಿವರು, ಮಾಜಿ ಸಚಿವರು, ಶಾಸಕರು ಶುಭ ಕೋರಿದರು. 

ಕನಕಪುರದ ಜನತೆಗೆ ಉಡುಗೊರೆ: ಡಿ.ಕೆ.ಶಿವಕುಮಾರ್ ತಮ್ಮ ಪುತ್ರಿಯ ವಿವಾಹದ ಪ್ರಯುಕ್ತ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಸುಮಾರು 2.50 ಲಕ್ಷ ಜನತೆಗೆ ಬಟ್ಟೆ ಹಾಗೂ ಸಿಹಿ ತಿಂಡಿಗಳನ್ನು ತಮ್ಮ ಬೆಂಬಲಿಗರ ಮೂಲಕ ಎಲ್ಲ ಗ್ರಾಮಗಳಲ್ಲೂ ವಿತರಣೆ ಮಾಡಿಸಿದ್ದಾರೆ.

ಕನಕಪುರದ ತಮ್ಮ ಸ್ವಗ್ರಾಮದಲ್ಲೆ ಐಶ್ವರ್ಯಾ ಅವರ ಅದ್ಧೂರಿ ವಿವಾಹ ಆಯೋಜಿಸಲು ಡಿ.ಕೆ.ಶಿವಕುಮಾರ್ ಉದ್ದೇಶಿಸಿದ್ದರು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಚಾತುರ್ಯಗಳು ನಡೆಯದಂತೆ ಎಚ್ಚರ ವಹಿಸಲು ಬೆಂಗಳೂರಿನ ಖಾಸಗಿ ಹೊಟೇಲ್‍ನಲ್ಲಿ ವಿವಾಹ ಸಮಾರಂಭವನ್ನು ಆಯೋಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News