ಸ್ಟ್ಯಾನಿ ಡಿಸೋಜ

Update: 2021-02-15 13:11 GMT

ಕುಂದಾಪುರ, ಫೆ.15: ಭಾರತೀಯ ಜೀವಾ ವಿಮಾ ನಿಗಮದ ಸಲಹೆಗಾರ, ಪ್ರಗತಿಪರ ಕೃಷಿಕ, ಹಳೆ ಅಳಿವೆ ನಿವಾಸಿ ಸ್ಟ್ಯಾನಿ ಡಿಸೋಜ(58) ಅಲ್ಪಕಾಲದ ಅಸೌಖ್ಯದಿಂದ ಕುಂದಾಪುರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷರಾಗಿ, ಕ್ಯಾಥೋಲಿಕ್ ಸಭಾದ ಅಧ್ಯಕ್ಷರಾಗಿ, ಕುಂದಾಪುರದ ಬ್ಲಾಕ್ ಕಾಂಗ್ರೆಸ್ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾಗಿ, ರೋಟರಿ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ, ವಾರ್ಡಿನ ಗುರಿಕಾರರಾಗಿ ಇವರು ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ