×
Ad

ಬಾಲಕಿಯ ಕುತ್ತಿಗೆಯಿಂದ 3.5 ಕೆ.ಜಿ ತೂಕದ ಗೆಡ್ಡೆ ತೆಗೆದ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು

Update: 2021-02-16 20:07 IST

ಬೆಂಗಳೂರು, ಫೆ.16: ಗುಜರಾತ್‍ನ ಅಮೆರ್ಲಿ ಜಿಲ್ಲೆಯ 15 ವರ್ಷದ ಸುರಭಿ ಬೇನ್ ಎಂಬ ಬಾಲಕಿಯ ಕುತ್ತಿಗೆಯಿಂದ ಎದೆವರೆಗೂ ವಿಸ್ತರಿಸಿದ್ದ ಫುಟ್ಬಾಲ್ ಗಾತ್ರದ ಸುಮಾರು 3.5 ಕೆಜಿ ತೂಕದ ಮೆತ್ತನೆಯ ಗೆಡ್ಡೆಯನ್ನು ಯಶಸ್ವಿಯಾಗಿ ತೆಗೆಯುವಲ್ಲಿ ಆ್ಯಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.

ಒಂದು ದಶಕಕ್ಕೂ ಹೆಚ್ಚು ಕಾಲ ಸುರಭಿಯ ಜೀವನದ ಮೇಲೆ ಪರಿಣಾಮ ಬೀರಿದ ಅಪಾಯಕಾರಿಯಲ್ಲದ ಗೆಡ್ಡೆಯನ್ನು ವೈದ್ಯರು ಈಗ ‘ಫೈಬ್ರೊಮಾಟೋಸಿಸ್’ ಎಂದು ಗುರುತಿಸಿದ್ದಾರೆ. 21 ವೈದ್ಯರ ತಂಡ ಜೀವರಕ್ಷಕ ಶಸ್ತ್ರಚಿಕಿತ್ಸೆ ನಡೆಸಿದೆ.

ಅರಿವಳಿಕೆ ಮತ್ತು ಕ್ರಿಟಿಕಲ್ ಕೇರ್ ವಿಭಾಗದ ಮುಖ್ಯ ಸಲಹಾ ತಜ್ಞ ಡಾ.ಅರುಣ್ ವಿ, ಸರ್ಜಿಕಲ್ ಆಂಕೊಲಾಜಿ ಸಲಹಾ ತಜ್ಞ ಡಾ.ಜಿ.ಗಿರೀಶ್, ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯ ಮತ್ತು ಹಿರಿಯ ಸಲಹಾ ತಜ್ಞ ಡಾ.ಮಧುಸೂದನ್ ಜಿ, ಮಕ್ಕಳ, ಹೆಮಟಾಲಜಿ, ಆಂಕೊಲಾಜಿ ಮತ್ತು ಬಿಎಚಿಟಿ ಸಲಹಾ ತಜ್ಞ ಡಾ.ಸಿ.ಪಿ.ರಘುರಾಂ, ಮಕ್ಕಳ ಶಸ್ತ್ರ ಚಿಕಿತ್ಸಾ ವಿಭಾಗದ ಸಲಹಾ ತಜ್ಞ ಡಾ.ನರೇಂದ್ರಬಾಬು ಸೇರಿದಂತೆ ಇನ್ನಿತರ ತಜ್ಞ ವೈದ್ಯರು ಈ ತಂಡದ ಭಾಗವಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News