×
Ad

6ನೇ ತರಗತಿಯ ‘ಹೊಸ ಧರ್ಮಗಳ ಉದಯ’ ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ

Update: 2021-02-19 12:38 IST

ಬೆಂಗಳೂರು : 2020-21 ನೇ ಸಾಲಿನ 6 ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ 7ನೇ ಪಾಠ (ಹೊಸ ಧರ್ಮಗಳ ಉದಯ) ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

6 ನೇ ತರಗತಿ ಸಮಾಜ ವಿಜ್ಞಾನ- ಭಾಗ 1 ರಲ್ಲಿನ ಪಾಠ-7 ‘ಹೊಸ ಧರ್ಮಗಳ ಉದಯ’ ಈ ಪಾಠದಲ್ಲಿನ ಪುಟ ಸಂಖ್ಯೆ: 82 ಹಾಗು 83ರಲ್ಲಿನ ವಿಷಯಾಂಶಗಳನ್ನು, 2020-21ನೆ ಶೈಕ್ಷಣಿಕ ಸಾಲಿಗೆ ಬೋಧನೆ-ಕಲಿಕೆ/ ಮೌಲ್ಯಮಾಪನಕ್ಕೆ ಪರಿಗಣಿಸದಂತೆ ಸಂಬಂಧಿಸಿದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ಶಿಕ್ಷಣ ಇಲಾಖೆ ತಿಳಿಸಿದ್ದು, ಇದರ ಕುರಿತು ಕೈಗೊಂಡ ಕ್ರಮಗಳನ್ನು ಫೆ. 28ರೊಳಗೆ ವರದಿ ಮಾಡಲು ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News