ಮಹಿಳಾ ಪ್ರಾಂಶುಪಾಲೆಗೆ ಲೈಂಗಿಕ ಕಿರುಕುಳ ಆರೋಪ: ದೂರು ದಾಖಲು

Update: 2021-02-19 12:58 GMT

ಬೆಂಗಳೂರು, ಫೆ.19: ನಗರದ ಪ್ರತಿಷ್ಠಿತ ಕ್ಲಬ್ ಉಪಾಧ್ಯಕ್ಷರೊಬ್ಬರು ಮಹಿಳಾ ಪ್ರಾಂಶುಪಾಲರೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

ಬೆಂಗಳೂರಿನ ಬಸನವನಗುಡಿಯ ಯುನಿಯನ್ ಕ್ಲಬ್ ಉಪಾಧ್ಯಕ್ಷ ಮೋಹನ್ ರಾವ್ ಎಂಬಾತನ ವಿರುದ್ಧ ಈ ಸಂಬಂಧ ದೂರು ದಾಖಲಾಗಿದೆ.

ಫೆ.6ರಂದು ಮಹಿಳಾ ಪ್ರಾಂಶುಪಾಲರೊಬ್ಬರು ಯುನಿಯನ್ ಕ್ಲಬ್‍ಗೆ ಹೋಗಿದ್ದು, ಅಲ್ಲಿ ಅವರನ್ನು ತಡೆದಿದ್ದ ಮೋಹನ್ ರಾವ್, ಅಸಭ್ಯವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ಇಲ್ಲಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಮೋಹನ್ ರಾವ್ ವಿರುದ್ಧ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News