ಇರಾನ್‌ನ ‘ಅಸ್ಥಿರಕಾರಿ ಚಟುವಟಿಕೆಗಳ’ ನಿಗ್ರಹಕ್ಕೆ ಜೊತೆಯಾಗಿ ಕೆಲಸ: ಯುರೋಪಿಯನ್ ದೇಶಗಳಿಗೆ ಬೈಡನ್ ಕರೆ

Update: 2021-02-20 18:48 GMT

ವಾಶಿಂಗ್ಟನ್, ಫೆ. 20: ಮಧ್ಯಪ್ರಾಚ್ಯದಲ್ಲಿ ಇರಾನ್ ನಡೆಸುತ್ತಿದೆಯೆನ್ನಲಾದ ‘ಅಸ್ಥಿರಗೊಳಿಸುವ ಚಟುವಟಿಕೆಗಳ’ನ್ನು ನಿಗ್ರಹಿಸಲು ಜೊತೆಯಾಗಿ ಕೆಲಸ ಮಾಡುವಂತೆ ಅವ್ಟೆುರಿಕ ಅಧ್ಯಕ್ಷ ಜೋ ಬೈಡನ್ ಶುಕ್ರವಾರ ಯುರೋಪಿಯನ್ ದೇಶಗಳನ್ನು ಒತ್ತಾಯಿಸಿದ್ದಾರೆ.

 ಇರಾನ್‌ನೊಂದಿಗೆ ವ್ಯವಹರಿಸುವ ವಿಷಯದಲ್ಲಿ ಅಮೆರಿಕವು ಮಿತ್ರದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದು ಎಂದು ಮ್ಯೂನಿಕ್ ಸೆಕ್ಯುರಿಟಿ ಸಮ್ಮೇಳನವನ್ನು ಉದ್ದೇಶಿಸಿ ಆನ್‌ಲೈನ್ ಭಾಷಣ ಮಾಡಿದ ಬೈಡನ್ ಹೇಳಿದರು.

 ‘‘ಪರಮಾಣು ಪ್ರಸರಣದ ಬೆದರಿಕೆಯು ಮುಂದುವರಿದಿದ್ದು, ಅದನ್ನು ನಿಗ್ರಹಿಸಲು ಸೂಕ್ಷ್ಮ ರಾಜತಾಂತ್ರಿಕತೆ ಮತ್ತು ನಮ್ಮ ನಡುವೆ ಸಹಕಾರ ಅಗತ್ಯವಾಗಿದೆ’’ ಎಂದು ಅಮೆರಿಕದ ಅಧ್ಯಕ್ಷ ಹೇಳಿದರು.

‘‘ಹಾಗಾಗಿಯೇ, ಇರಾನ್ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐದು ಖಾಯಂ ಸದಸ್ಯ ದೇಶಗಳಾದ ಅಮೆರಿಕ, ರಶ್ಯ, ಚೀನಾ, ಬ್ರಿಟನ್ ಮತ್ತು ಫ್ರಾನ್ಸ್ ಹಾಗೂ ಜರ್ಮನಿ ದೇಶಗಳ ನಡುವೆ ಮರು ಮಾತುಕತೆಗೆ ನಾವು ಮುಂದಾಗಿದ್ದೇವೆ’’ ಎಂದರು.

ಯುರೋಪಿಯನ್ ಮಿತ್ರಪಕ್ಷಗಳ ನೇತೃತ್ವದಲ್ಲಿ ಇರಾನ್ ಜೊತೆಗೆ ಪರಮಾಣು ಮಾತುಕತೆ ನಡೆಸಲು ಶ್ವೇತಭವನ ಒಪ್ಪಿದ ಒಂದು ದಿನದ ಬಳಿಕ ಬೈಡನ್ ಈ ಹೇಳಿಕೆ ನೀಡಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News