ವಿಜಯ ಹಝಾರೆ ಟ್ರೋಫಿ ಟೂರ್ನಿ: ಇತಿಹಾಸ ನಿರ್ಮಿಸಿದ ಜಾರ್ಖಂಡ್

Update: 2021-02-21 04:18 GMT

ಇಂದೋರ್: ನಾಯಕ ಇಶಾನ್ ಕಿಶನ್ ಭರ್ಜರಿ ಶತಕದ(173) ನೆರವಿನಿಂದ ಜಾರ್ಖಂಡ್ ತಂಡ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಇತಿಹಾಸದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಸಾಧನೆ ಮಾಡಿದೆ. ಇಂೋರ್‌ನಲ್ಲಿ ಶನಿವಾರ ನಡೆದ ಮಧ್ಯಪ್ರದೇಶ ವಿರುದ್ಧ ಪಂದ್ಯದಲ್ಲಿ ಜಾರ್ಖಂಡ್ ಈ ಸಾಧನೆ ಮಾಡಿತು. ಕಿಶನ್ ನೇತೃತ್ವದ ಜಾರ್ಖಂಡ್ ತಂಡ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 422 ರನ್ ಗಳಿಸಿತು.

ಈ ಹಿಂದೆ ವಿಜಯ ಹಝಾರೆ ಟ್ರೋಫಿಯಲ್ಲಿ ತಂಡವೊಂದು 6 ವಿಕೆಟ್ ನಷ್ಟಕ್ಕೆ 412 ರನ್ ಗಳಿಸಿತ್ತು. 2010ರಲ್ಲಿ ರೈಲ್ವೇಸ್ ವಿರುದ್ಧ ಮಧ್ಯಪ್ರದೇಶ ತಂಡ ಈ ಮೈಲುಗಲ್ಲು ತಲುಪಿತ್ತು.

ಗೆಲ್ಲಲು 423 ರನ್ ಗುರಿ ಬೆನ್ನಟ್ಟಿದ ಮಧ್ಯಪ್ರದೇಶ 18.4 ಓವರ್‌ಗಳಲ್ಲಿ ಕೇವಲ 98 ರನ್‌ಗೆ ಆಲೌಟಾಯಿತು. ವರುಣ್ ಆ್ಯರೊನ್(6-37)ದಾಳಿಗೆ ತತ್ತರಿಸಿದ ಮ.ಪ್ರ.ದ ಪರ ಅಭಿಷೇಕ್ ಭಂಡಾರಿ(42 ರನ್)ವೈಯಕ್ತಿಕ ಗರಿಷ್ಠ ಸ್ಕೋರ್ ಗಳಿಸಿದರು. ಕಿಶನ್ ಅಬ್ಬರ:  ವಿಜಯ ಹಝಾರೆ ಟ್ರೋಫಿಯ ಎಲೈಟ್ ‘ಬಿ’ ಗುಂಪಿನ ಪಂದ್ಯದಲ್ಲಿ ಮಧ್ಯಪ್ರದೇಶದ ವಿರುದ್ಧ ಅಮೋಘ

್ರದರ್ಶನ ನೀಡಿರುವ ಕಿಶನ್ ಕೇವಲ 94 ಎಸೆತಗಳಲ್ಲಿ 19 ಬೌಂಡರಿ, 11 ಸಿಕ್ಸರ್‌ಗಳ ಸಹಿತ 173 ರನ್ ಗಳಿಸಿದರು. ಕಿಶನ್ ಕೇವಲ 74 ಎಸೆತಗಳಲ್ಲಿ 5 ಸಿಕ್ಸರ್ ಹಾಗೂ 12 ಬೌಂಡರಿಗಳ ನೆರವಿನಿಂದ ಶತಕವನ್ನು ಪೂರೈಸಿದರು. ಕಿಶನ್ ಎದುರಿಸಿದ ಕೊನೆಯ 20 ಎಸೆತಗಳಲ್ಲಿ 71 ರನ್ ಗಳಿಸಿದ್ದು, ತಂಡದ ಮೊತ್ತವನ್ನು 26ನೇ ಓವರ್‌ನಲ್ಲಿ 200 ರನ್ ಗಡಿ ದಾಟಿಸಿದರು. ಲಿಸ್ಟ್ ‘ಎ’ ಕ್ರಿಕೆಟ್ ಇತಿಹಾಸದಲ್ಲಿ ಕಿಶನ್ ಗರಿಷ್ಠ ವೈಯಕ್ತಿಕ ಸ್ಕೋರ್ ಗಳಿಸಿರುವ ಮೂರನೇ ವಿಕೆಟ್‌ಕೀಪರ್-ನಾಯಕನೆಂಬ ಹಿರಿಮೆಗೆ ಪಾತ್ರರಾದರು. ಜಾರ್ಖಂಡ್ ಪರ ಕಿಶನ್‌ರಲ್ಲದೆ ಅನುಕೂಲ್ ರಾಯ್ 72 ರನ್, ವಿರಾಟ್ ಸಿಂಗ್(68) ಹಾಗೂ ಸುಮಿತ್ ಕುಮಾರ್ 52 ರನ್ ಗಳಿಸಿದರು. 28ನೇ ಓವರ್‌ನಲ್ಲಿ ಗೌರವ್ ಯಾದವ್,ಕಿಶನ್ ಅಬ್ಬರದ ಬ್ಯಾಟಿಂಗ್‌ಗೆ ತೆರೆ ಎಳೆದಾಗ ಪಾರ್ಥ್ ಸಹಾನಿ ನೇತೃತ್ವದ ಮಧ್ಯಪ್ರದೇಶ ತಂಡ ನಿಟ್ಟುಸಿರುಬಿಟ್ಟಿತು.ಆದರೆ, ಆನಂತರ ಜಾರ್ಖಂಡ್ ತಂಡ ಇನ್ನೂ 240 ರನ್ ಸೇರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News