ಸಿಮೊನಾ ಹ್ಯಾಲೆಪ್ ಖತರ್ ಓಪನ್‌ನಿಂದ ಹೊರಕ್ಕೆ

Update: 2021-02-24 04:47 GMT

ಪ್ಯಾರಿಸ್: ವಿಶ್ವದ ಮೂರನೇ ಕ್ರಮಾಂಕದ ಮಹಿಳಾ ಟೆನಿಸ್ ಆಟಗಾರ್ತಿ ಸಿಮೊನಾ ಹ್ಯಾಲೆಪ್ ಮುಂದಿನ ವಾರ ನಡೆಯಲಿರುವ ಖತರ್ ಓಪನ್‌ನಿಂದ ಹೊರಗುಳಿದಿದ್ದಾರೆ ಎಂದು ಸಂಘಟಕರು ಮಂಗಳವಾರ ಪ್ರಕಟಿಸಿದ್ದಾರೆ.

  ರೊಮೇನಿಯದ ಹ್ಯಾಲೆಪ್ ಅವರು ಇತ್ತೀಚೆಗೆ ಆಸ್ಟ್ರೇಲಿಯ ಓಪನ್ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್ ವಿರುದ್ಧ ಸೋಲು ಅನುಭವಿಸಿದ್ದರು.

   ಮಾರ್ಚ್ 1ರಿಂದ 6ರ ತನಕ ನಡೆಯಲಿರುವ ಪಂದ್ಯಾವಳಿಯಿಂದ ಹೊರಗುಳಿಯುವ ವಿಚಾರದಲ್ಲಿ ಹ್ಯಾಲೆಪ್ ಯಾವುದೇ ಕಾರಣವನ್ನು ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News