ಭಾರತ ವಿರುದ್ಧದ ಮೂರನೇ ಟೆಸ್ಟ್: ಇಂಗ್ಲೆಂಡ್ ಗೆ ಆರಂಭಿಕ ಆಘಾತ, 7 ವಿಕೆಟ್ ಪತನ

Update: 2021-02-24 12:19 GMT

ಅಹ್ಮದಾಬಾದ್: ಭಾರತ ವಿರುದ್ಧ ಬುಧವಾರ ಇಲ್ಲಿ ಆರಂಭವಾದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಆರಂಭಿಕ ಆಘಾತಕ್ಕೆ ಒಳಗಾಗಿದ್ದು, ಟೀ ವಿರಾಮದ ಬಳಿಕ 35 ಓವರ್ ಗಳಲ್ಲಿ 7 ವಿಕೆಟ್ ಗಳ ನಷ್ಟಕ್ಕೆ 91 ರನ್ ಗಳಿಸಿದೆ.

ವಿಶ್ವದ ಅತ್ಯಂತ ದೊಡ್ಡ ಸ್ಟೇಡಿಯಂ ಮೊಟೆರಾದಲ್ಲಿ ಬುಧವಾರ ಆರಂಭವಾದ ಹಗಲು-ರಾತ್ರಿ ಪಂದ್ಯದಲ್ಲಿ ಟಾಸ್ ಜಯಿಸಿದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 3ನೇ ಓವರ್ ನಲ್ಲಿ 2 ರನ್ ಸೇರಿಸುವಷ್ಟರಲ್ಲಿ ಇಂಗ್ಲೆಂಡ್ ನ ಮೊದಲ ವಿಕೆಟ್ ಪತನವಾಯಿತು. ಆರಂಭಿಕ ಬ್ಯಾಟ್ಸ್ ಮನ್ ಡಾಮ್ ಸಿಬ್ಲಿ(0)ಖಾತೆ ತೆರೆಯುವ ಮೊದಲೇ ವಿಕೆಟ್ ಒಪ್ಪಿಸಿದರು. ಜಾನಿ ಬೈರ್ ಸ್ಟೋವ್ ಕೂಡ ಶೂನ್ಯಕ್ಕೆ ಔಟಾದರು.

ಆರಂಭಿಕ ಬ್ಯಾಟ್ಸ್ ಮನ್ ಝಾಕ್ ಕ್ರಾವ್ಲೆ ಅರ್ಧಶತಕ (53, 84 ಎಸೆತ, 10 ಬೌಂಡರಿ)ಸಿಡಿಸಿದರು. ನಾಯಕ ಜೋ ರೂಟ್ ಕೇವಲ 17 ರನ್ ಗಳಿಸಿ ಔಟಾದರು. ಝಾಕ್ ಕ್ರಾವ್ಲೆ ಸ್ಪಿನ್ನರ್ ಅಕ್ಷರ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದರು.

ಒಲ್ಲಿ ಪೋಪ್ (1), ಬೆನ್ ಸ್ಟೋಕ್ಸ್ (6), ಜೋಫ್ರಾ ಅರ್ಚರ್ (11) ಹಾಗೂ ಜಾಕ್ ಲೀಚ್ (3)ಒಂದಂಕಿಯ ಸ್ಕೋರ್ ಗಳಿಸಿದರು.

ಭಾರತದ ಪರ ಅಕ್ಷರ್ ಪಟೇಲ್ (4-36) ಹಾಗೂ ಆರ್.ಅಶ್ವಿನ್ (3-26)7 ವಿಕೆಟ್ ಗಳನ್ನು ಹಂಚಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News