ಜಿ.ಎಂ.ಪಾಟೀಲ್

Update: 2021-02-26 14:53 GMT

ಉಡುಪಿ, ಫೆ.26: ಉಡುಪಿ ನಗರಸಭೆಯಲ್ಲಿ ಇಂಜಿನೀಯರ್ ಆಗಿ ಸೇವೆ ಸಲ್ಲಿಸಿದ್ದ ಬೈಲೂರಿನ ಕೊರಂಗ್ರಪಾಡಿ ನಿವಾಸಿ ಜಿ.ಎಂ.ಪಾಟೀಲ್(65) ಅನಾರೋಗ್ಯದಿಂದ ಫೆ.24 ರಂದು ಸ್ವಗೃಹದಲ್ಲಿ ನಿಧನರಾದರು.

ಇವರು ಪತ್ನಿ ಹಾಗೂ ಓರ್ವ ಪುತ್ರಿ, ಓರ್ವ ಪುತ್ರ ಹಾಗು ಅಪಾರ ಬಂದು ಗಳನ್ನು ಅಗಲಿದ್ದಾರೆ.

ಇವರು ನಗರಸಭೆ, ವಾರಾಹಿ ಯೋಜನೆ, ಮಂಗಳೂರಿನ ಮೆಸ್ಕಾಂ ವಿಭಾಗದಲ್ಲೂ ಸೇವೆ ಸಲ್ಲಿಸಿದ್ದಾರೆ. ಇವರ ನಿಧನಕ್ಕೆ ಉಡುಪಿ ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಹಾಗೂ ಅಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ