'ಸಪ್ತಪದಿ' ಯೋಜನೆಯಡಿ ಸರಳ ವಿವಾಹಕ್ಕೆ ಅರ್ಜಿ ಆಹ್ವಾನ

Update: 2021-02-26 17:38 GMT

ಬೆಂಗಳೂರು, ಫೆ. 26: ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಸಾಮೂಹಿಕ ಸರಳ ವಿವಾಹ ಕಾರ್ಯಕ್ರಮವನ್ನು ಮಾರ್ಚ್‍ನಿಂದ ಜುಲೈ ತಿಂಗಳವರಗೆ ನೆರವೇರಿಸಲು ಅರ್ಹ ವಧು-ವರರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದ್ದಾರೆ.

ಬನಶಂಕರಿಯ ಬನಶಂಕರಿ ದೇವಾಲಯ, ಹನುಮಂತನಗರದ ಕುಮಾರಸ್ವಾಮಿ ಮತ್ತು ಸಮೂಹ ದೇವಾಲಯಗಳು, ಗವೀಪುರಂ ಗುಟ್ಟಳ್ಳಿಯ ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ, ಬಸವನಗುಡಿಯ ದೊಡ್ಡಗಣಪತಿ ದೇವಾಸ್ಥಾನ ಮತ್ತು ಮಲ್ಲಿಕಾರ್ಜುನಸ್ವಾಮಿ ದೇವಾಲಯ, ಮಲ್ಲೇಶ್ವರಂನಲ್ಲಿರುವ ಕಾಡುಮಲ್ಲೇಶ್ವರ ದೇವಾಲಯ ಮತ್ತು ವೇಣುಗೋಪಾಲ ಕೃಷ್ಣಸ್ವಾಮಿ ದೇವಾಲಯ, ಚಾಮರಾಜಪೇಟೆಯ ಮಿಂಟೋ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಗಳು ನೆರವೇರಲಿವೆ.

ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳುವ ವರನಿಗೆ ವಿವಾಹ ಸಾಮಗ್ರಿಗಳನ್ನು ಖರೀದಿಸಲು 5 ಸಾವಿರ ರೂ.ನಗದು ಹಾಗೂ ವಧುವಿಗೆ ಒಡವೆ ಮತ್ತು ವಿವಾಹ ಸಾಮಗ್ರಿಗಳನ್ನು ಖರೀದಿಸಲು 50 ಸಾವಿರ ರೂ.ಹಣವನ್ನು ದೇವಾಲಯದಿಂದಲೇ ನೀಡಲಾಗುವುದು. ಈ ಅವಕಾಶವನ್ನು ಸದುಪಯೋಗಪಡಿದುಕೊಳ್ಳಲು ಬಯಸುವವರು ದೇವಾಲಯಗಳಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ವಿವಾಹದ ಲಗ್ನ, ಸಮಯ ಹಾಗೂ ಇತರೆ ಮಾಹಿತಿಗಾಗಿ ನೋಡಲ್ ಅಧಿಕಾರಿಯಾದ ಪದ್ಮಾ-9845716687, ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರಯ್ಯ-94492 24465, ಸಿ.ಕೃಷ್ಣ-9980951333, ಮೋಹನ್98800 55733 ಹಾಗೂ ಡಿ.ನಾಗರಾಜು 9980151936 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News