ಕಣ್ವಾ ಸೌಹಾರ್ದ ಕೋ-ಆಪರೇಟಿವ್ ವಂಚನೆ ಪ್ರಕರಣ: ಠೇವಣಿದಾರರಿಂದ ಪ್ರತಿಭಟನೆ

Update: 2021-02-26 17:39 GMT

ಬೆಂಗಳೂರು, ಫೆ.26: ಕಣ್ವಾ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್ ಸಂಸ್ಥೆಯೂ ಹಣ ಹಿಂದಿರುಗಿಸದೆ ವಂಚಿಸಿದೆ ಎಂದು ಆರೋಪಿಸಿ ಠೇವಣಿದಾರರು ಬೃಹತ್ ಪ್ರತಿಭಟನೆ ನಡೆಸಿದರು.

ಶುಕ್ರವಾರ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಠೇವಣಿದಾರರು, ಕಣ್ವಾ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಲಿಮಿಟೆಡ್‍ನಲ್ಲಿ ಸಾವಿರಾರು ಮಂದಿ ಹಣ ತೊಡಗಿಸಿದ್ದಾರೆ. ಅವರೆಲ್ಲರಿಗೂ ಠೇವಣಿ ಹಣ ಹಿಂದಿರುಗಿಸದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಕಣ್ವಾ ಸಂಸ್ಥೆಯ ನೂರಾರು ಮಂದಿ ಸಿಬ್ಬಂದಿ, ಏಜೆಂಟರುಗಳು ಸಾರ್ವಜನಿಕರು, ಹಿರಿಯ ನಾಗರಿಕರಿಂದ ಶೇ.15ರವರೆಗೆ ಬಡ್ಡಿ ನೀಡುವುದಾಗಿ ಹಣ ಪಾವತಿಸಿಕೊಂಡು ವಂಚನೆ ನಡೆಸಿದ್ದಾರೆ ಎಂದು ಆರೋಪಿಸಿದರು.

ಕಣ್ವಾ ಸಂಸ್ಥೆಯು ಸುಮಾರು 650 ಕೋಟಿಯಷ್ಟು ಹಣವನ್ನು ಠೇವಣಿದಾರರಿಂದ ಲೂಟಿ ಮಾಡಿದೆ. ಕೂಡಲೇ ಸಂಕಷ್ಟಕ್ಕೆ ಸಿಲುಕಿಸಿರುವ ಠೇವಣಿದಾರರಿಗೆ ಹಣ ನೀಡಿ ನ್ಯಾಯ ದೊರಕಿಸಿಕೊಡುವಂತೆ ಪ್ರತಿಭಟನಾಕಾರರು ಒತ್ತಾಯ ಮಾಡಿದರು.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News