ಜಲಮಂಡಳಿ: ಒಳಚರಂಡಿ ಸ್ವಚ್ಛಗೊಳಿಸಲು ಯಂತ್ರ ಬಳಕೆ ಕಡ್ಡಾಯ

Update: 2021-02-27 17:52 GMT

ಬೆಂಗಳೂರು, ಫೆ.27: ಬಿಬಿಎಂಪಿ ವ್ಯಾಪ್ತಿಯಲ್ಲಿ ಎಸ್‍ಟಿಪಿ ಟ್ಯಾಂಕ್, ಒಳಚರಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್-ಜೆಟ್ಟಿಂಗ್ ಯಂತ್ರ ಬಳಕೆ ಕಡ್ಡಾಯವೆಂದು ಜಲ ಮಂಡಳಿ ತಿಳಿಸಿದೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಲಮಂಡಳಿ, ಮ್ಯಾನ್ಯುಯಲ್ ಸ್ಕ್ಯಾವೇಂಜಿಂಗ್ ನಾಗರಿಕ ಜಗತ್ತಿಗೆ ಕಪ್ಪು ಚುಕ್ಕೆ. ಸಾಮಾಜಿಕ ನ್ಯಾಯ ಮತ್ತು ಮಾನವೀಯ ಮೌಲ್ಯಗಳು ಎಲ್ಲರಿಗೂ ಸಮಾನವಾಗಿವೆ. ಹೀಗಾಗಿ ಮಲದ ಗುಂಡಿಗಳನ್ನು ವ್ಯಕ್ತಿಗಳ ಮೂಲಕ ಮಾಡಿಸುವುದು ಅಮಾನವೀಯ ಹಾಗೂ ಶಿಕ್ಷಾರ್ಹ ಅಪರಾಧವಾಗಿದೆ ಎಂದು ಎಚ್ಚರಿಕೆ ನೀಡಿದೆ.

ಯುಜಿಡಿ ಮೆಷಿನ್ ಹೋಲ್‍ಗಳನ್ನು ಹಾಗೂ ಸೆಪ್ಟಿಕ್ ಟ್ಯಾಂಕ್‍ಗಳನ್ನು ಕೆಲಸಗಾರರ ಮೂಲಕ ನೇರವಾಗಿ ಸ್ವಚ್ಛಗೊಳಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಹೀಗಾಗಿ ಸಾರ್ವಜನಿಕರು ಮೆಷಿನ್‍ಹೋಲ್ ಹಾಗೂ ಎಸ್‍ಟಿಪಿಗಳ ಸ್ವಚ್ಛತೆಯನ್ನು ಸಕ್ಕಿಂಗ್, ಜೆಟಿಂಗ್ ಯಂತ್ರಗಳ ಮೂಲಕ ಮಾಡಬೇಕು.

ಸಕ್ಕಿಂಗ್, ಜೆಟ್ಟಿಂಗ್ ಯಂತ್ರಗಳ ಮೂಲಕ ಸೆಪ್ಟಿಕ್ ಟ್ಯಾಂಕ್‍ಗಳ ಸ್ವಚ್ಛಗೊಳಿಸಲು ಸಾರ್ವಜನಿಕರು ಸಹಾಯವಾಣಿ 14420ಕ್ಕೆ ಕರೆ ಮಾಡಬಹುದೆಂದು ಜಲಮಂಡಳಿ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News