ಕಳವು ಪ್ರಕರಣ: ಐವರು ಆರೋಪಿಗಳ ಬಂಧನ, 80 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

Update: 2021-03-01 17:27 GMT

ಬೆಂಗಳೂರು, ಮಾ.1: ಮನೆಯ ಹಿಂಬಾಗಿಲ ಮೂಲಕ ಒಳನುಗ್ಗಿ ಆಭರಣಗಳನ್ನು ದೋಚಿದ್ದ 5 ಮಂದಿಯನ್ನು ಕೆಂಗೇರಿ ಗೇಟ್ ಉಪ ವಿಭಾಗದ ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿ 80 ಲಕ್ಷ ರೂ. ಬೆಲೆಯ 1600 ಗ್ರಾಂ ತೂಕದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ವಾಲ್ಮೀಕಿ ನಗರದ ಯಾಸೀನ್‍ ಖಾನ್(35), ಖದೀರ್ ಅಹ್ಮದ್(25), ಅಕ್ರಂ ಪಾಷ(32), ಗೋಪಾಲ್ (36) ಮತ್ತು ಕೈಲಾಶ್(22) ಬಂಧಿತರು ಎಂದು ಪೊಲೀಸರು ತಿಳಿಸಿದ್ದಾರೆ.

2017 ಆಗಸ್ಟ್ 12 ರಂದು ಈ ವ್ಯಾಪ್ತಿಯ ಮನೆಯೊಂದರ ಹಿಂಬಾಗಿಲು ಮೀಟಿ ಒಳನುಗ್ಗಿದ ಕಳ್ಳರು ಬೀರುವಿನಲ್ಲಿದ್ದ 52 ಗ್ರಾಂತೂಕದ ಚಿನ್ನದ ಒಡವೆಗಳು, 1580 ತೂಕದ ಬೆಳ್ಳಿಯ ಸಾಮಾನುಗಳು, 7 ಸಾವಿರ ಹಣ ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಅನ್ನಪೂರ್ಣೇಶ್ವರಿ ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

ಕೆಂಗೇರಿ ಗೇಟ್ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಯು.ಡಿ.ಕೃಷ್ಣಕುಮಾರ್ ಮತ್ತು ಸಿಬ್ಬಂದಿ ಅಂದಿನಿಂದಲೂ ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಐವರ ಬಂಧನದಿಂದ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯ 6 ಕನ್ನಗಳವು ಪ್ರಕರಣಗಳು ಸೇರಿದಂತೆ ಒಟ್ಟು 13 ಪ್ರಕರಣಗಳನ್ನು ಪತ್ತೆ ಹಚ್ಚಿ 80 ಲಕ್ಷ ರೂ. ಬೆಲೆಬಾಳುವ ಆಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News