ಬೆಂಗಳೂರು: ಮಾಸ್ಕ್ ಧರಿಸದ ಪ್ರಕರಣ; 9.10 ಕೋಟಿ ರೂ. ದಂಡ ವಸೂಲಿ

Update: 2021-03-02 18:07 GMT

ಬೆಂಗಳೂರು, ಮಾ.2: ನಗರದಲ್ಲಿ ಮಾಸ್ಕ್ ಧರಿಸದೆ ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳದ 3.87 ಲಕ್ಷ ಜನರಿಂದ 9.10 ಕೋಟಿ ರೂ. ದಂಡ ಸಂಗ್ರಹಿಸಲಾಗಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮಾಸ್ಕ್ ಧರಿಸದ ಪ್ರಕರಣ ಸಂಬಂಧ 3,61,792 ಜನರಿಂದ 8.53 ಕೋಟಿ ರೂ. ಹಾಗೂ ಸುರಕ್ಷಿತ ಅಂತರ ಕಾಪಾಡಿಕೊಳ್ಳದ 25,524 ಜನರಿಂದ 57,06,585ರೂ. ದಂಡ ಸಂಗ್ರಹಿಸಲಾಗಿದೆ. ಒಟ್ಟಾರೆ 3,87,316 ಜನ ಇಲ್ಲಿಯವರೆಗೆ ಕೊರೋನ ಸೋಂಕು ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News