ಮಂಧಾನ 6ನೇ ಸ್ಥಾನಕ್ಕೆ ಹಿಂಭಡ್ತಿ

Update: 2021-03-03 04:46 GMT

ದುಬೈ: ಭಾರತದ ಮಹಿಳಾ ಏಕದಿನ ಕ್ರಿಕೆಟ್ ತಂಡದ ಓಪನರ್ ಸ್ಮತಿ ಮಂಧಾನ ಬ್ಯಾಟ್ಸ್ ವುಮನ್‌ಗಳ ರ್ಯಾಂಕಿಂಗ್ ಪಟ್ಟಿಯಲ್ಲಿ ಎರಡು ಸ್ಥಾನಗಳನ್ನು ಕಳೆದುಕೊಂಡು ಆರನೇ ಸ್ಥಾನಕ್ಕೆ ತಲುಪಿದ್ದಾರೆ. ಆದರೆ ಜುಲಾನ್ ಗೋಸ್ವಾಮಿ ಮಂಗಳವಾರ ಬಿಡುಗಡೆ ಮಾಡಲಾದ ಐಸಿಸಿ ಮಹಿಳಾ ಏಕದಿನ ಕ್ರಿಕೆಟ್ ಆಟಗಾರ್ತಿಯರ ಶ್ರೇಯಾಂಕದ ಬೌಲರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

 687 ಪಾಯಿಂಟ್‌ಗಳೊಂದಿಗೆ ಅನುಭವಿ ಮಿಥಾಲಿ ರಾಜ್ 9ನೇ ಸ್ಥಾನದಲ್ಲಿದ್ದಾರೆ ಮತ್ತು ಅಗ್ರ 10ರಲ್ಲಿ ಸ್ಥಾನ ಪಡೆದಿರುವ ಭಾರತದ ಎರಡನೇ ಭಾರತೀಯ ಬ್ಯಾಟ್ಸ್‌ವುಮನ್ ಆಗಿದ್ದಾರೆ. ಮಂಧಾನ 732 ಅಂಕಗಳನ್ನು ಹೊಂದಿದ್ದಾರೆ.

 ನ್ಯೂಝಿಲ್ಯಾಂಡ್‌ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಇಂಗ್ಲೆಂಡ್ ಓಪನರ್ ಟಮ್ಮಿ ಬ್ಯೂಮಾಂಟ್ ಐದು ಸ್ಥಾನಗಳ ಭಡ್ತಿ ಪಡೆದು ಅಗ್ರ ಸ್ಥಾನವನ್ನು ಗಳಿಸಿದ್ದಾರೆ.

 ಬ್ಯೂಮಾಂಟ್ ವೆಸ್ಟ್ ಇಂಡಿಯನ್ ಸ್ಟಫಾನಿ ಟೇಲರ್ ಮತ್ತು ನ್ಯೂಝಿಲ್ಯಾಂಡ್‌ನ ಆಮಿ ಸ್ಯಾಟರ್ಟ್‌ವೈಟ್‌ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. ಆಸ್ಟ್ರೇಲಿಯ ನಾಯಕಿ ಮೆಗ್ ಲ್ಯಾನಿಂಗ್ 2ನೇ ಸ್ಥಾನ ಗಳಿಸಿದ್ದಾರೆ.

  ಗೋಸ್ವಾಮಿ (691), ಪೂನಮ್ ಯಾದವ್ (679), ಶಿಖಾ ಪಾಂಡೆ (675) ಮತ್ತು ದೀಪ್ತಿ ಶರ್ಮಾ (639) ಅಗ್ರ -10ರಲ್ಲಿ ಸ್ಥಾನ ಪಡೆದ ಭಾರತದ ಇತರ ಬೌಲರ್‌ಗಳು. ಇವರೆಲ್ಲರೂ ತಮ್ಮ ಹಿಂದಿನ ಶ್ರೇಯಾಂಕದ ಸ್ಥಾನಗಳನ್ನು ಉಳಿಸಿಕೊಂಡಿದ್ದಾರೆ. ಆಸ್ಟ್ರೇಲಿಯದ ಜೆಸ್ ಜೊನಾಸ್ಸೆನ್ 804 ಅಂಕಗಳೊಂದಿಗೆ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಮೇಗನ್ ಶುಟ್ (735) ಎರಡನೇ ಸ್ಥಾನ ತಲುಪಿದ್ದಾರೆ.

ಆಲ್‌ರೌಂಡರ್‌ಗಳಲ್ಲಿ ಆಸ್ಟ್ರೇಲಿಯದ ಎಲಿಸ್ ಪೆರ್ರಿ ನಂ.1 ಸ್ಥಾನ, ದೀಪ್ತಿ ಶರ್ಮಾ 359 ಅಂಕಗಳೊಂದಿಗೆ ನಾಲ್ಕನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News