ಬೆಂಗಳೂರು: ಬೈಕ್ ಸವಾರನಿಗೆ 18,500 ರೂ. ದಂಡ

Update: 2021-03-04 18:23 GMT

ಬೆಂಗಳೂರು, ಮಾ.4: ಬರೋಬ್ಬರಿ 31 ಬಾರಿ ಸಂಚಾರ ನಿಯಮ ಉಲ್ಲಂಘನೆ ಆರೋಪದಡಿ ಬೈಕ್ ಸವಾರನೋರ್ವನಿಗೆ ಇಲ್ಲಿನ ಪೂರ್ವ ವಿಭಾಗದ ಸಂಚಾರ ಪೊಲೀಸರು 18,500 ರೂ. ದಂಡ ವಿಧಿಸಿದ್ದಾರೆ.

ವಾಹನಗಳ ತಪಾಸಣೆ ನಡೆಸುತ್ತಿದ್ದ ವೇಳೆ ಬೈಕ್ ಸವಾರ ಸಿಕ್ಕಿಬಿದ್ದಿದ್ದು, ದಂಡ ಪರಿಶೀಲನೆ ನಡೆಸಿದಾಗ ನಿಯಮ ಉಲ್ಲಂಘನೆ ಪ್ರಕರಣಗಳು ಬೆಳಕಿಗೆ ಬಂದಿದೆ. ಹಾಗಾಗಿ, ಸಂಚಾರ ಪೂರ್ವ ವಿಭಾಗದ ಹಲಸೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ, ಬೈಕ್ ಸವಾರನಿಂದ 18,500 ರೂ. ದಂಡವನ್ನು ವಸೂಲಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News