ರಂಗಭೂಮಿ ಬದುಕು ಕಟ್ಟಿಕೊಳ್ಳಲು ನೆರವಾಗಲಿದೆ: ಶೋಭಾ ವೆಂಕಟೇಶ್

Update: 2021-03-07 17:39 GMT

ಬೆಂಗಳೂರು, ಮಾ. 7: ‘ರಂಗಭೂಮಿಯು ಯುವಜನತೆಗೆ ಸಹನೆ, ಹೋರಾಟ ಮತ್ತು ಮಾನವೀಯತೆಯನ್ನು ಕಲಿಸುವುದರ ಜೊತೆಗೆ ಬದುಕನ್ನು ಕಟ್ಟಿಕೊಳ್ಳಲು ನೆರವಾಗುತ್ತದೆ' ಎಂದು ವಿಜಯನಗರ ಬಿಂಬ ಸಂಸ್ಥೆ ಅಧ್ಯಕ್ಷೆ, ರಂಗಭೂಮಿ ಕಲಾವಿದೆ ಶೋಭಾ ವೆಂಕಟೇಶ್ ಇಂದಿಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಇಲ್ಲಿನ ಸರಕಾರಿ ರಾಮ್ ನಾರಾಯಣ್ ಚೆಲ್ಲಾರಾಮ್ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಹೊನ್ನುಡಿ ಕನ್ನಡ ಸಂಘದ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ‘ಕಾಲೇಜುಗಳಲ್ಲಿ ರಂಗಭೂಮಿಯ ಅವಶ್ಯಕತೆ' ಕುರಿತು ಉಪನ್ಯಾಸ ನೀಡಿದ ಅವರು, ರಂಗಭೂಮಿ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವುದರಲ್ಲಿಯೂ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದೆ. ತರಗತಿಗಳಲ್ಲಿ ನಡೆಯುವ ಬೋಧನೆ ಮತ್ತು ಕಲಿಕೆಯ ಜೊತೆ ವಿದ್ಯಾರ್ಥಿಗಳು ಒಂದು ಉತ್ತಮವಾದ ನಾಟಕವನ್ನು ಕಲಿತು ಅಭಿನಯಿಸುವುದು, ಅವರಲ್ಲಿ ಆತ್ಮವಿಶ್ವಾಸ, ನಾಯಕತ್ವದ ಗುಣಗಳನ್ನು ಬೆಳೆಸುವುದರ ಜೊತೆಗೆ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಶೋಭಾ ವೆಂಕಟೇಶ್ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮಣ ಎ.ಕುಲಗೋಡು ಮಾತನಾಡಿ, ರಂಗಭೂಮಿ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳನ್ನು ಕುರಿತು ಜ್ಞಾನವನ್ನು ಹೆಚ್ಚಿಸುವುದರ ಜೊತೆಗೆ ಸಂಬಂಧಗಳ ಮಹತ್ವದ ಬಗ್ಗೆ ಅರಿವು ಮೂಡಿಸುತ್ತದೆ ಎಂದರು.

ಹೊನ್ನುಡಿ ಕನ್ನಡ ಸಂಘದ ಸಂಚಾಲಕಿ ಪ್ರೊ.ಪ್ರೇಮಾವತಿ, ಪ್ರೊ.ಸಚಿತಾ ಬೋಪಯ್ಯ, ಪ್ರೊ.ಸುಧಾ ಮಧ್ವರಾಜ್, ಡಾ.ಎಜಾಜ್ ಅಹಮದ್ ಖಾನ್, ಡಾ.ಮುನೀರ್ ಅಹಮದ್, ಡಾ.ಎಂ.ಬೈರೇಗೌಡ, ಡಾ.ಶ್ವೇತಾಕಲ್ಮಠ್, ಡಾ.ಅನಿತಾ, ಡಾ.ಶ್ರೀಲಕ್ಷ್ಮಿ, ಡಾ.ಭಾಗ್ಯಲಕ್ಷ್ಮಿ, ಪ್ರೊ.ರಹಮತುಲ್ಲಾ, ಪ್ರೊ.ತಹಸೀನ್, ಪ್ರೊ.ಲಕ್ಷ್ಮಿ, ಡಾ.ಸುಧಾಮಣಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News