ಪ್ರತ್ಯೇಕ ಟೆಂಡರ್ ಆಹ್ವಾನ ಆರೋಪ:ಬಿಬಿಎಂಪಿ ಇಂಜಿನಿಯರ್ ಅಮಾನತು

Update: 2021-03-11 15:35 GMT

ಬೆಂಗಳೂರು, ಮಾ.11: ಪ್ರತ್ಯೇಕ ಟೆಂಡರ್ ಆಹ್ವಾನ ಆರೋಪದ ಮೇರೆಗೆ ಪ್ರಭಾರ ಕಾರ್ಯಪಾಲಕ ಎಂಜಿನಿಯರ್ (ಯೋಜನೆ-ದಕ್ಷಿಣ ವಲಯ) ಮಹಂತೇಶ್ ಬುರ್ನಪುರ ಅವರನ್ನು ಬಿಬಿಎಂಪಿ ಅಮಾನತು ಮಾಡಿದೆ.

ನಗರದ ಯಡಿಯೂರು ವಾರ್ಡ್‍ನಲ್ಲಿ ಸಮುದಾಯ ಭವನದ ಕಾಮಗಾರಿಗೆ ಟೆಂಡರ್ ಕರೆಯುವ ವೇಳೆ, ಮೊದಲ ಮಹಡಿಗೆ, ಎರಡನೇ ಮಹಡಿಗೆ ಹಾಗೂ ಎಲೆಕ್ಟ್ರಿಕಲ್ ಕೆಲಸಗಳಿಗೆ ಪ್ರತ್ಯೇಕವಾಗಿ ಟೆಂಡರ್ ಆಹ್ವಾನಿಸಿದ ಆರೋಪದ ಮೇರೆಗೆ ಅವರನ್ನು ಅಮಾನತು ಮಾಡಲಾಗಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.

ಲೋಕೋಪಯೋಗಿ ಇಲಾಖೆ ನಿಯಮಾವಳಿ 85(6)ರ ಪ್ರಕಾರ ಒಂದೇ ಸ್ಥಳದಲ್ಲಿ ನಡೆಸುವ ಒಂದು ಕಾಮಗಾರಿಗೆ ಒದಗಿಸಲಾದ ಅನುದಾನಕ್ಕೆ ಅನುಗುಣವಾಗಿ ಸಮಗ್ರವಾಗಿ ಒಂದು ಟೆಂಡರ್ ಮಾತ್ರ ಕರೆಯಬೇಕು. ಟೆಂಡರ್ ಕರೆಯುವಾಗ ಕಾಮಗಾರಿಯನ್ನು ವಿಭಜಿಸಲು ಅವಕಾಶ ಇಲ್ಲ. ಆದರೆ, ಮಹಂತೇಶ್ ಅವರು ಸಮುದಾಯ ಭವನದ ಕಾಮಗಾರಿಯನ್ನು ಮೂರು ಭಾಗಗಳಾಗಿ ವಿಭಜಿಸಿ ಟೆಂಡರ್ ಆಹ್ವಾನಿಸಿದ್ದಾರೆ. ಇದರಿಂದ ಬಿಬಿಎಂಪಿಯ ಘನತೆಗೆ ಧಕ್ಕೆ ಉಂಟಾಗಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News