‘ದಿಕ್ಕು ತಪ್ಪಿದ ಮೀಸಲಾತಿ ಹೋರಾಟ': ಮಾ.14ರಂದು ಸಮಾಲೋಚನಾ ಸಭೆ
Update: 2021-03-13 18:28 IST
ಬೆಂಗಳೂರು, ಮಾ. 13: ‘ದಿಕ್ಕು ತಪ್ಪಿದ ಮೀಸಲಾತಿ ಹೋರಾಟ' ವಿಷಯದ ಕುರಿತು ನಾಳೆ(ಮಾ.14) ಬೆಳಗ್ಗೆ 11ಗಂಟೆಗೆ ನಗರದ ಗಾಂಧಿ ಭವನದ ಬೋರ್ಡ್ ಸಭಾಂಗಣದಲ್ಲಿ ದಲಿತ, ಹಿಂದುಳಿದ ಮತ್ತು ಪ್ರಗತಿಪರರ ಸಮಾಲೋಚನಾ ಸಭೆಯನ್ನು ಏರ್ಪಡಿಸಲಾಗಿದೆ.
ಸಂವಿಧಾನ ತಜ್ಞ, ಮಾಜಿ ಅಡ್ವಕೆಟ್ ಜನರಲ್ ಹಾಗೂ ಹಿರಿಯ ನ್ಯಾಯವಾದಿ ಪ್ರೊ. ರವಿವರ್ಮ ಕುಮಾರ್, ಸಂಸ್ಕೃತಿ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಲೇಖಕ ಪ್ರೊ.ಎನ್.ವಿ.ನರಸಿಂಹಯ್ಯ, ಸಾಮಾಜಿಕ ಕಳಕಳಿ ವೇದಿಕೆಯ ಡಾ.ರಾಜಾನಾಯ್ಕ್, ಹಿಂದುಳಿದ ಜಾತಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಣ್ಣೆಗೆರೆ ವೆಂಕಟರಾಮಯ್ಯ, ಲೇಖಕ ವಿಕಾಸ್ ಆರ್.ಮೌರ್ಯ ಪಾಲ್ಗೊಳ್ಳಲಿದ್ದಾರೆ.
ದಲಿತ ಮುಖಂಡರಾದ ಮಾವಳ್ಳಿ ಶಂಕರ್, ಗುರುಪ್ರಸಾದ್ ಕೆರಗೋಡು, ವಿ.ನಾಗರಾಜ್, ಲಕ್ಷ್ಮಿ ನಾರಾಯಣ ನಾಗವಾರ, ಎನ್.ಮುನಿಸ್ವಾಮಿ, ಎನ್.ವೆಂಕಟೇಶ್ ಭಾಗವಹಿಸಲಿದ್ದು, ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಜಂಟಿ ವೇದಿಕೆ ಆಶ್ರಯದಲ್ಲಿ ಈ ಸಮಾಲೋಚನೆ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.