ಕಾವೇರಿ ನದಿ ಜೋಡಣೆ ಕ್ರಮ ಖಂಡಿಸಿ ಪ್ರತಿಭಟನೆ

Update: 2021-03-13 14:37 GMT

ಬೆಂಗಳೂರು, ಮಾ.13: ಕಾವೇರಿ ನದಿ ಜೋಡಣೆಗೆ ತಮಿಳುನಾಡು ಸರಕಾರ 118 ಕಿ.ಮೀ ಉದ್ದದ ಕಾಲುವೆ ತೋಡಲು ಮುಂದಾಗಿರುವ ಕ್ರಮ ಖಂಡಿಸಿ ಕನ್ನಡ ಚಳುವಳಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.

ಶನಿವಾರ ಬೆಂಗಳೂರಿನಿಂದ ಮೈಸೂರುವರೆಗೆ ವಾಹನಗಳ ಮೆರವಣಿಗೆ ಮಾಡುವ ಮೂಲಕ ಪ್ರತಿಭಟಿಸಿದ ಅವರು, ಕಾವೇರಿ ನದಿಗೆ ಅಡ್ಡಲಾಗಿ ಕಾಲುವೆ ಕಟ್ಟುತ್ತಿರುವ ತಮಿಳುನಾಡು ಸರಕಾರದ ಕ್ರಮ ತೀವ್ರ ಖಂಡನೀಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಮಹದಾಯಿ ಯೋಜನೆ ಬಗ್ಗೆ ಮಹಾರಾಷ್ಟ್ರ, ಗೋವಾ ಸರಕಾರ ಕಾನೂನು ಹೋರಾಟ ಮಾಡುತ್ತಿದ್ದರೂ ಕರ್ನಾಟಕ ಸರ್ಕಾರ ರಾಜ್ಯದ ಹಿತಾಸಕ್ತಿಯನ್ನು ಮರೆತು ಕುಳಿತಿದೆ ಎಂದ ಅವರು, 118 ಕಿ.ಮೀ ಉದ್ದದ ಕಾಲುವೆ ಕಟ್ಟಲು ಮುಂದಾಗಿದ್ದರೂ ಕರ್ನಾಟಕ ಸರಕಾರ ಕಣ್ಮುಚ್ಚಿ ಕುಳಿತಿದೆ. ರಾಜ್ಯದ ಸಂಸದರು ಧ್ವನಿ ಎತ್ತದಿರುವುದು ರಾಜ್ಯದ ಮೇಲಿನ ನಿಷ್ಕಾಳಜಿಯನ್ನು ಪ್ರದರ್ಶಿಸುತ್ತದೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News