ಮಾ.15ರಂದು ಅಂಗನಾಡಿ ಕಾರ್ಯಕರ್ತೆಯರಿಂದ ಉಪವಾಸ ಸತ್ಯಾಗ್ರಹ

Update: 2021-03-13 18:06 GMT

ಬೆಂಗಳೂರು, ಮಾ.13: ಗೌರವ ಧನ ಹೆಚ್ಚಳ, ಕೋವಿಡ್ ಕಾರ್ಯದ ವೇಳೆ ಮೃತಪಟ್ಟ ಅಂಗನವಾಡಿ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಮಾ.15ರಂದು ನಗರದ ಸ್ವಾತಂತ್ರ್ಯ ಉದ್ಯಾನವನ ಹಾಗೂ ಆಯಾ ಜಿಲ್ಲೆಯ ಸಿಡಿಪಿಒ ಕಚೇರಿ ಮುಂಭಾಗ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ತೀರ್ಮಾನಿಸಿದೆ.

ಈ ಕುರಿತು ಮಾಹಿತಿ ನೀಡಿದ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷ್ಮಿ, ಕೋವಿಡ್-19 ಕಾರ್ಯದ ವೇಳೆ ಮೃತಪಟ್ಟ 26ಮಂದಿಯ ಕುಟುಂಬಸ್ಥರಿಗೆ ಇಲ್ಲಿಯವರೆಗೂ ಪರಿಹಾರ ನೀಡಲಾಗಿಲ್ಲ. ಹಾಗೂ ನಿವೃತ್ತರಾದ 7304 ಮಂದಿ ನೌಕರರಿಗೆ ನೀಡಬೇಕಾದ ನಿವೃತ್ತಿ ವೇತನವನ್ನು ನೀಡಿಲ್ಲ. ಹೀಗಾಗಿ ಪ್ರತಿಭಟನೆ ಅನಿವಾರ್ಯವಾಗಿದೆ ಎಂದು ತಿಳಿಸಿದ್ದಾರೆ.

ಅಂಗನವಾಡಿ ನೌಕರರು ಮಾಡಬೇಕಾದ ಹೆಚ್ಚುವರಿ ಕೆಲಸಗಳಾದ ಇ-ಸರ್ವೇ, ಬಿಪಿಎಲ್ ಕಾರ್ಡ್, ಆರ್‍ಸಿಎಸ್ ಸರ್ವೇ, ಭಾಗ್ಯಲಕ್ಷ್ಮಿ, ಮಾತೃವಂದನಾ, ಮಾತೃಶ್ರೀ ಹಾಗೂ ಚುನಾವಣಾ ಕಾರ್ರ್ಯಗಳನ್ನು ಬಹಿಷ್ಕರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News