ರಾಬರ್ಟ್ ಸಿನಿಮಾ ಪೈರಸಿ ಆರೋಪ: ಮತ್ತೋರ್ವ ಬಂಧನ
Update: 2021-03-14 20:24 IST
ಬೆಂಗಳೂರು, ಮಾ.14: ದರ್ಶನ್ ನಟನೆಯ ರಾಬರ್ಟ್ ಚಿತ್ರವನ್ನು ಪೈರಸಿ ಮಾಡುತ್ತಿದ್ದ ಆರೋಪದಡಿ ಮತ್ತೊಬ್ಬನನ್ನು ಮಾಗಡಿ ರಸ್ತೆ ಠಾಣಾ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ.
ಯಾದಗಿರಿ ಮೂಲದ ವಿಶ್ವನಾಥ್ ಎಂಬಾತ ಬಂಧಿತ ಆರೋಪಿಯಾಗಿದ್ದು, ಹಲವರೊಂದಿಗೆ ಜತೆಗೂಡಿ ರಾಬರ್ಟ್ ಸಿನಿಮಾದ ವಿಡಿಯೊ ತಯಾರಿಸಿ ಸಂಪೂರ್ಣ ಸಿನಿಮಾವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಲಾಗುತ್ತಿತ್ತು. ಬಂಧಿತನ ಮೊಬೈಲ್ ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.