ಮುಕ್ತ ವಿವಿಗೆ ಪ್ರವೇಶ ಪ್ರಾರಂಭ

Update: 2021-03-15 14:58 GMT

ಉಡುಪಿ, ಮಾ.15: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಡುಪಿ ಪ್ರಾದೇಶಿಕ ಕೇಂದ್ರದಲ್ಲಿ ಪ್ರಥಮ ವರ್ಷದ ಬಿಎ/ಬಿಕಾಂ, ಎಂಎ/ಎಂಕಾಂ/ಎಂಬಿಎ/ಎಂಎಸ್ಸಿ, ಡಿಪ್ಲೊಮ (10+2 ಆಧಾರಿತ), ಡಿಪ್ಲೊಮ (ಪದವಿ ಆಧಾರಿತ) ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರಸಕ್ತ ಸಾಲಿನ (ಫೆಬ್ರವರಿ-ಮಾರ್ಚ್ ಆವೃತ್ತಿ) ಪ್ರವೇಶಗಳು ಪ್ರಾರಂಭಗೊಂಡಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ದಂಡ ಶುಲ್ಕವಿಲ್ಲದೆ ಎ.12, 200 ರೂ. ದಂಡ ಶುಲ್ಕದೊಡನೆ ಎ.26 ಮತ್ತು 400 ರೂ. ದಂಡ ಶುಲ್ಕದೊಡನೆ ಎಪ್ರಿಲ್ 30 ಕೊನೆ ದಿನವಾಗಿರುತ್ತದೆ. ಬಿಎಡ್ ಶಿಕ್ಷಣಕ್ಕೆ ಪ್ರವೇಶ ಬಯಸುವವರಿಗೆ ಅರ್ಜಿ ಸಲ್ಲಿಸಲು ಮಾರ್ಚ್ 29 ಕೊನೆ ದಿನವಾಗಿದ್ದು, ಬಿ.ಎಡ್‌ಗೆ ಸಾಮಾನ್ಯ ಪ್ರವೇಶ ಪರೀಕ್ಷೆಯು ಎಪ್ರಿಲ್ 4ರಂದು ನಡೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಕರಾಮುವಿ ವೆಬ್‌ಸೈಟ್- www.ksoumysuru.ac.in -ಅಥವಾ ಉಡುಪಿ ಪ್ರಾದೇಶಿಕ ಕೇಂದ್ರ ಕಚೇರಿಯನ್ನು ಸಂಪರ್ಕಿಸುವಂತೆ ಉಡುಪಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ: ಕೆ.ಪಿ. ಮಹಾಲಿಂಗಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News