×
Ad

ಬೆಂಗಳೂರು: ಮೆಟ್ರೋ ಸಂಚಾರ ತಾತ್ಕಾಲಿಕ ಸ್ಥಗಿತ

Update: 2021-03-17 20:19 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.17: ನಗರದ ನಾಡಪ್ರಭು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್ ಮತ್ತು ಮೈಸೂರು ರಸ್ತೆ ನಡುವೆ ಮೆಟ್ರೋ ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಮೈಸೂರು ರಸ್ತೆಯಿಂದ ಕೆಂಗೇರಿವರೆಗಿನ ಪೂರ್ವ-ಪಶ್ಚಿಮ ವಿಸ್ತರಿಸಿದ ನೇರಳೆ ಮಾರ್ಗ ಪೂರ್ವ ನಿಯೋಜನೆಗೆ ಸಂಬಂಧಿಸಿದಂತೆ ಮಾಗಡಿ ರಸ್ತೆಯಿಂದ ಮೈಸೂರು ರಸ್ತೆ ಮಾರ್ಗದಲ್ಲಿ ಸಿಗ್ನಲಿಂಗ್ ವ್ಯವಸ್ಥೆಗೆ ಮಾರ್ಪಾಡು ಕಾಮಗಾರಿಗಳನ್ನು ನಮ್ಮ ಮೆಟ್ರೋ ಕೈಗೆತ್ತಿಕೊಂಡಿರುವ ಹಿನ್ನೆಲೆ ಮಾ.21 ರಿಂದ 28ರವರೆಗೆ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

ಇದರಿಂದಾಗಿ ನೇರಳೆ ಮಾರ್ಗದಲ್ಲಿರುವ ಮೆಟ್ರೋ ಸೇವೆಗಳು ಈ ಅವಧಿಯಲ್ಲಿ ಬೈಯಪ್ಪನಹಳ್ಳಿ ಮತ್ತು ನಾಡಪ್ರಭು ಕೆಂಪೇಗೌಡ ನಿಲ್ದಾಣ ನಡುವೆ ಮಾತ್ರ (ವಾಣಿಜ್ಯ ಸೇವೆ) ಲಭ್ಯವಿರುತ್ತದೆ. ಮಾ.29ರ ಬೆಳಗ್ಗೆ 7ಗಂಟೆಯಿಂದ ಎಂದಿನಂತೆ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸೇವೆಗಳು ಪುನರಾಂಭಗೊಳ್ಳುತ್ತದೆ. ಹೀಗಾಗಿ, ವಿಸ್ತರಣಾ ಮಾರ್ಗದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಲು ಪ್ರಯಾಣಿಕರು ಸಹಕರಿಸುವಂತೆ ಬಿಎಂಆರ್‍ಸಿಎಲ್ ಮನವಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News