ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಾರೆ ಎಂದ ಬಂಗಾಳದ ಬಿಜೆಪಿ ಅಧ್ಯಕ್ಷ ದಿಲಿಪ್ ಘೋಷ್

Update: 2021-03-18 06:31 GMT

ಕೋಲ್ಕತಾ: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರ ಕಾರ್ಯದತ್ತ ಹೆಚ್ಚು ಗಮನ ನೀಡುವೆ ಎಂದು ಬಿಜೆಪಿಯ ಪಶ್ಚಿಮಬಂಗಾಳ ಘಟಕದ ಅಧ್ಯಕ್ಷ ದಿಲಿಪ್ ಘೋಷ್ ತಿಳಿಸಿದ್ದಾರೆ.

ಚುನಾವಣೆಯಲ್ಲಿ ಸ್ದರ್ಧಿಸುವ ಅಭ್ಯರ್ಥಿಗಳಪಟ್ಟಿಯಲ್ಲಿ ನನ್ನಹೆಸರು ಇರುವುದಿಲ್ಲ. ರಾಜ್ಯಾಧ್ಯಕ್ಷನಾಗಿರುವ ನನ್ನ ಉಸ್ತುವಾರಿಯಡಿಯಲ್ಲಿ ಚುನಾವಣಾ ಪ್ರಚಾರ ನಡೆಸಲು ಪಕ್ಷವು ತೀರ್ಮಾನಿಸಿದೆ ಎಂದು ಎಎನ್ ಐಗೆ ದಿಲಿಪ್ ತಿಳಿಸಿದರು.

3ನೇ ಹಾಗೂ 4ನೇ ಹಂತದ ಚುನಾವಣೆಗೆ ಬಿಜೆಪಿ ರವಿವಾರ 63 ಅಭ್ಯರ್ಥಿಗಳಿರುವ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಕೇಂದ್ರ ಸಚಿವ ಬಾಬುಲ್ ಸುಪ್ರಿಯೊ ಹಾಗೂ ಟಿಎಂಸಿಯ ಇನ್ನೋರ್ವ ಮಾಜಿ ನಾಯಕ ರಾಜೀವ್ ಬ್ಯಾನರ್ಜಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News