ಪ್ರಧಾನಿ ಮೋದಿಗೆ ಧನ್ಯವಾದ ಹೇಳಿದ ಕ್ರಿಕೆಟಿಗ ಕ್ರಿಸ್ ಗೇಲ್

Update: 2021-03-19 07:59 GMT
(Source: Twitter)

ಹೊಸದಿಲ್ಲಿ: ಜಮೈಕಾಕ್ಕೆ ಕೊರೋನ ವೈರಸ್ ಲಸಿಕೆಗಳನ್ನು ದೇಣಿಗೆಯಾಗಿ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವೆಸ್ಟ್ ಇಂಡೀಸ್ ಕ್ರಿಕೆಟಿಗ ಕ್ರಿಸ್ ಗೇಲ್ ಧನ್ಯವಾದ ತಿಳಿಸಿದ್ದಾರೆ.

ಕೆರಿಬಿಯನ್ ದೇಶಕ್ಕೆ ಭಾರತವು ಕೊರೋನ ವೈರಸ್ ನ 50,000 ಡೋಸ್ ಗಳನ್ನು ಕಳುಹಿಸಿಕೊಟ್ಟಿತ್ತು. ಕ್ರಿಸ್ ಗೇಲ್ ಭಾರತಕ್ಕೆ ಧನ್ಯವಾದ ತಿಳಿಸಿದ ಜಮೈಕಾದ ಎರಡನೇ ಆಟಗಾರನಾಗಿದ್ದಾರೆ. ಅವರ ಸಹ ಆಟಗಾರ  ರಸೆಲ್ ಈ ಹಿಂದೆ ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದರು.

ಜಮೈಕಾಕ್ಕೆ ಕೊರೋನ ಲಸಿಕೆಗಳನ್ನು ದೇಣಿಗೆ ನೀಡಿರುವುದಕ್ಕೆ ಪ್ರಧಾನಿ ಮೋದಿ, ಭಾರತ ಸರಕಾರ ಹಾಗೂ ಭಾರತದ ಜನತೆಗೆ ನಾನು ಧನ್ಯವಾದ ಹೇಳಲು ಬಯಸುವೆ. ನಾವೆಲ್ಲರೂ ಇದನ್ನು ಶ್ಲಾಘಿಸುತ್ತೇವೆ ಎಂದು ಕ್ರಿಸ್ ಗೇಲ್ ಹೇಳಿದ್ದಾರೆ. ಜಮೈಕಾದ ಭಾರತೀಯ ಹೈ ಕಮಿಶನ್ ಸ್ಟಾರ್ ಬ್ಯಾಟ್ಸ್ ಮನ್ ಗೇಲ್ ಅವರ 17 ಸೆಕೆಂಡ್ ಗಳ ವೀಡಿಯೊವನ್ನು ಟ್ವೀಟಿಸಿದೆ.

ಬುಧವಾರ ಗೇಲ್ ಅವರ ಸಹ ಆಟಗಾರ ರಸೆಲ್ ತಮ್ಮ ದೇಶಕ್ಕೆ ಕೊರೋನವೈರಸ್ ಕಳುಹಿಸಿಕೊಟ್ಟಿದ್ದಕ್ಕೆ ಭಾರತಕ್ಕೆ ಧನ್ಯವಾದ ತಿಳಿಸಿದ್ದರು.

ಕೊರೋನ ವೈರಸ್ ಸಾಂಕ್ರಾಮಿಕ ರೋಗದ ವಿರುದ್ದ ಹೋರಾಟದಲ್ಲಿ ಬೇರೆ ದೇಶಗಳಿಗೆ ಸಹಾಯ ಮಾಡುವ ಉದ್ದೇಶದಿಂದ ಲಸಿಕೆ ಮೈತ್ರಿ ಉಪಕ್ರಮದ ಭಾಗವಾಗಿ ಭಾರತದಲ್ಲೇ ತಯಾರಿಸಲ್ಪಟ್ಟಿರುವ ಲಸಿಕೆಗಳನ್ನು ಈ ತಿಂಗಳ ಆರಂಭದಲ್ಲಿ ಭಾರತವು ವೆಸ್ಟ್ ಇಂಡೀಸ್ ಗೆ ಕಳುಹಿಸಿಕೊಟ್ಟಿತ್ತು.  ಮಾರ್ಚ್ 9ರಂದು ಭಾರತದ ಲಸಿಕೆಗಳು ಕೆರಿಬಿಯನ್ ದೇಶಕ್ಕೆ ತಲುಪಿದೆ ಎಂದು ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಟ್ವೀಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News