ಝೊಮಾಟೊ ಪ್ರಕರಣ: ನಾನು ಊರು ಬಿಟ್ಟು ಹೋಗಿಲ್ಲ ಎಂದ ಹಿತೇಶಾ ಚಂದ್ರಾಣಿ
Update: 2021-03-19 22:03 IST
ಬೆಂಗಳೂರು, ಮಾ.19: ನಾನು ಊರು ಬಿಟ್ಟು ಹೋಗಿಲ್ಲ. ನನ್ನ ವಿರುದ್ಧ ಕೇಳಿ ಬರುತ್ತಿರುವ ವದಂತಿ ಶುದ್ಧ ಸುಳ್ಳಾಗಿದೆ ಎಂದು ಹಿತೇಶಾ ಚಂದ್ರಾಣಿ ತಿಳಿಸಿದ್ದಾರೆ.
ಝೊಮಾಟೊ ಡೆಲಿವರಿ ಬಾಯ್ ಕಾಮರಾಜು ದೂರಿನನ್ವಯ ದಾಖಲಾಗಿರುವ ಎಫ್‍ಐಆರ್ ಕುರಿತು ಶುಕ್ರವಾರ ಪ್ರತಿಕ್ರಿಯಿಸಿರುವ ಹಿತೇಶಾ ಚಂದ್ರಾಣಿ, ಇತ್ತೀಚಿನ ಬೆಳವಣಿಗೆಯಿಂದ ಜೀವ ಬೆದರಿಕೆಯ ಭಯವಾಗುತ್ತಿದೆ, ಹಾಗಂತ ನಾನು ಎಲ್ಲಿಯೂ ಓಡಿ ಹೋಗಿಲ್ಲ ಎಂದರು.
ಬೆಂಗಳೂರು ನನಗೆ ಮನೆ ಇದ್ದಂತೆ ಎಂದ ಅವರು, ಕನ್ನಡಪರ ಸಂಘಟನೆಗಳು ನನಗೆ ಕರೆ ಮಾಡಿ ನಿಂದಿಸಿವೆ. ಅಲ್ಲದೆ, ನಾನು ನಡೆದಿರುವ ಘಟನೆ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ನೀಡಿದ್ದೆ. ಆದರೆ, ನನ್ನ ಮಾತುಗಳನ್ನು ತಿರುಚಿ ತಪ್ಪು ಭಾವನೆ ಹುಟ್ಟುವಂತೆ ಪ್ರಚಾರ ಮಾಡಲಾಗಿದ್ದು, ಇದರಿಂದ ಘಾಸಿಗೊಳಗಾಗಿದ್ದೇನೆ ಎಂದರು.