​ವಿಜೇಂದರ್ ಗೆಲುವಿನ ನಾಗಾಲೋಟಕ್ಕೆ ತಡೆ

Update: 2021-03-20 04:01 GMT

ಪಣಜಿ : ವೃತ್ತಿಪರ ಸರ್ಕ್ಯೂಟ್‌ನಲ್ಲಿ ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಅವರ ಗೆಲುವಿನ ಓಟ ಶುಕ್ರವಾರ ರಾತ್ರಿ ಕೊನೆಗೊಂಡಿದೆ. ರಷ್ಯಾದ ಎದುರಾಳಿ ಅಟಿಶ್ ಲೊಪ್ಸಾನ್ ಇಲ್ಲಿ ನಡೆದ ಬೌಟ್‌ನಲ್ಲಿ ಗೆಲುವಿನ ನಗೆ ಬೀರಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್ ಗೇಮ್ಸ್ ಕಂಚಿನ ಪದಕ ವಿಜೇತರಾದ ವಿಜೇಂದರ್, 2015ರಲ್ಲಿ ವೃತ್ತಿಪರ ಕುಸ್ತಿಪಟುವಾಗಿ ಮಾರ್ಪಟ್ಟಿದ್ದರು. 12-0 ಅಜೇಯ ದಾಖಲೆಯೊಂದಿಗೆ ಕಣಕ್ಕೆ ಇಳಿದ ವಿಜೇಂದರ್ "ಬ್ಯಾಟಲ್ ಆನ್ ಶಿಪ್"ನಲ್ಲಿ ನಿರಾಸೆ ಅನುಭವಿಸಿದರು.

ತಮ್ಮ ಎತ್ತರದ ಲಾಭ ಪಡೆದ ರಷ್ಯನ್ ಎದುರಾಳಿ ಮೊದಲ ಸುತ್ತಿನಲ್ಲೇ ವಿಜೇಂದರ್ ಅವರ ವಿರುದ್ಧ ಮೇಲುಗೈ ಸಾಧಿಸಿದರು. ಏಳನೇ ಬೌಟ್ ಹೋರಾಟದಲ್ಲಿ ರಷ್ಯನ್ ಸ್ಪರ್ಧಿ "ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೊ" ಹಡಗಿನ ಮೇಲ್ಚಾವಣಿಯಲ್ಲಿ ವಿಜೇಂದ್ರ ಅವರನ್ನು ಕೆಡವಿದರು. ಮಾಂಡೊವಿ ನದಿ ನೀರಲ್ಲಿ ನಡೆದ ಈ ಹೋರಾಟದಲ್ಲಿ ದೇಶೀಯ ಕುಸ್ತಿ ಅಭಿಮಾನಿಗಳಿಗೆ ನಿರಾಸೆಯಾಯಿತು.

ಎಂಟು ಸುತ್ತುಗಳ ಹೋರಾಟದ ಸ್ಪರ್ಧೆಯ ಐದನೇ ಸುತ್ತಿನಲ್ಲಿ ಒಂದು ನಿಮಿಷ ಮತ್ತು ಒಂಬತ್ತು ಸೆಕೆಂಡ್‌ಗಳ ಬಳಿಕ ರಷ್ಯನ್ ಸ್ಪರ್ಧಿಯನ್ನು ವಿಜೇತ ಎಂದು ಘೋಷಿಸಿದರು. 2ನೇ ಸುತ್ತಿನಲ್ಲಿ 26 ವರ್ಷ ವಯಸ್ಸಿನ ಲಾಪ್ಸನ್ ವಿಜೇಂದರ್ ಅವರ ಅನುಭವವನ್ನು ಮೀರಿಸುವಂತೆ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ತೋರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News