×
Ad

ವಸತಿ ರಹಿತರ ಕುರಿತು ನಡೆಸಿದ ಸಮೀಕ್ಷೆಯ ವರದಿ ಸಲ್ಲಿಕೆಗೆ ಹೈಕೋರ್ಟ್ ನಿರ್ದೇಶನ

Update: 2021-03-23 21:36 IST

ಬೆಂಗಳೂರು, ಮಾ.23: ನಗರ ಪ್ರದೇಶದಲ್ಲಿ ವಸತಿ ರಹಿತರ ಕುರಿತಂತೆ ನಡೆಸಿದ ಸಮೀಕ್ಷೆಯ ವರದಿ ಹಾಗೂ ರಾತ್ರಿ ವಸತಿ ರಹಿತರಿಗಾಗಿ ನಿರಾಶ್ರಿತರ ತಾಣಗಳ ನಿರ್ಮಾಣ ಮಾಡಿರುವ ಬಗ್ಗೆ ಮಾಹಿತಿ ಒದಗಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಿದೆ. 

ಈ ಕುರಿತು ಪೀಪಲ್ಸ್ ಯೂನಿಯನ್ ಆಫ್ ಸಿವಿಲ್ ಲಿಬರ್ಟೀಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ವಸತಿ ರಹಿತರಿಗಾಗಿ 64 ನಿರಾಶ್ರಿತರ ತಾಣಗಳ ನಿರ್ಮಾಣ ಪೈಕಿ ಕೇವಲ 47 ತಾಣಗಳನ್ನು ನಿರ್ಮಾಣ ಮಾಡಿದ್ದೀರಿ. ವಸತಿ ರಹಿತರ ಕುರಿತಂತೆ ನಡೆಸುತ್ತೀರುವ ಸಮೀಕ್ಷೆ ಮುಗಿದ ಬಳಿಕ ಅವರಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ನಿರಾಶ್ರಿತರ ತಾಣಗಳ ಕುರಿತು ಪ್ರಮಾಣ ಪತ್ರ ಸಲ್ಲಿಸಬೇಕೆಂದು ಸೂಚಿಸಿತು. ವಿಚಾರಣೆಯನ್ನು 2021ರ ಮೇ 26ಕ್ಕೆ ಮುಂದೂಡಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News