×
Ad

ಬೆಂಗಳೂರು : ಆಸ್ಟರ್‌ ಆಸ್ಪತ್ರೆಯಿಂದ 1500 ಉಚಿತ ಎಂಆರ್‌ಐ, ಸಿಟಿ ಸ್ಕ್ಯಾನ್‌ ಸೌಲಭ್ಯ

Update: 2021-03-26 16:16 IST

ಬೆಂಗಳೂರು : ರಾಜ್ಯದ ಹಿಂದುಳಿದ ಜನರಿಗೆ ಗುಣಮಟ್ಟದ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡುವ ಪ್ರಯತ್ನದ ಭಾಗವಾಗಿ ಬೆಂಗಳೂರಿನ ಆಸ್ಟರ್‌ ಆಸ್ಪತ್ರೆ ಮುಂದಿನ 1 ವರ್ಷದಲ್ಲಿ ಕರ್ನಾಟಕದಲ್ಲಿ  ಅಗತ್ಯವಿರುವ ಜನರಿಗೆ 1500 ಉಚಿತ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳನ್ನು ಒದಗಿಸುವುದಾಗಿ ಘೋಷಿಸಿದೆ.

ಆಸ್ಟರ್ ಡಿಎಂ ಹೆಲ್ತ್‌ಕೇರ್‌ನ 34 ನೇ ಫೌಂಡೇಶನ್ ದಿನದ ಅಂಗವಾಗಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತಿದ್ದು, ಇದರಡಿಯಲ್ಲಿ ಹೆಲ್ತ್‌ಕೇರ್‌ ಗ್ರೂಪ್‌ ಭಾರತ ಮತ್ತು ಜಿಸಿಸಿಯಾದ್ಯಂತ ದೀನದಲಿತರಿಗೆ 10,000 ಉಚಿತ ವೈದ್ಯಕೀಯ ತಪಾಸಣಾ ಸೇವೆ ಒದಗಿಸಲು ಬದ್ಧವಾಗಿದೆ.

ಇದರ ಭಾಗವಾಗಿ, ಆಸ್ಟರ್ ಹಾಸ್ಪಿಟಲ್ಸ್ ಬೆಂಗಳೂರು, ಜನರಲ್ ಹಾಸ್ಪಿಟಲ್ ಯಲಹಂಕ, ದೇವನಹಳ್ಳಿ, ದೊಡ್ಡಬಳ್ಳಾಪುರ, ಮತ್ತು ಬೆಂಗಳೂರು ಉತ್ತರದ ನೆಲಮಂಗಲ ಹೀಗೆ ನಾಲ್ಕು ಆಸ್ಪತ್ರೆಗಳೊಂದಿಗೆ ಕೈ ಜೋಡಿಸಿದೆ. ಶ್ರೀ ಕೃಷ್ಣ ಸೇವಾ ಆಶ್ರಮ, ಸೇವಾಕ್ಷೇತ್ರ ಆಸ್ಪತ್ರೆ ಮತ್ತು ದಕ್ಷಿಣ ಬೆಂಗಳೂರಿನ ಆರ್.ವಿ. ಈ ಆಸ್ಪತ್ರೆಗಳು ಶಿಫಾರಸು ಮಾಡಲ್ಪಟ್ಟ ಅಗತ್ಯತೆಯಿರುವ ರೋಗಿಗಳಿಗೆ ಎಂಆರ್ಐ ಮತ್ತು ಸಿಟಿ ಸ್ಕ್ಯಾನ್ ಗಳನ್ನು ನಡೆಸಲಿವೆ. ಸಂಸ್ಥೆಯ ಸಿಎಸ್‌ಆರ್‌ ಭಾಗವಾದ ಆಸ್ಟರ್ ವಲಂಟಿಯರ್ಸ್‌ ಇದನ್ನು ನಡೆಸಿಕೊಡಲಿದ್ದಾರೆ ಮತ್ತು ಅನೇಕ ರೋಗಿಗಳು ಎದುರಿಸುತ್ತಿರುವ ತ್ವರಿತ ರೋಗಪತ್ತೆ ಮತ್ತು ನಿಖರ ಚಿಕಿತ್ಸೆಯ ಅಗತ್ಯವನ್ನು ನಿಭಾಯಿಸುವ ಗುರಿ ಇದರ ಹಿಂದಿದೆ.

ಅನೇಕ ಆರೋಗ್ಯ ತಜ್ಞರ ಪ್ರಕಾರ, ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ಗಳು ರೋಗಪತ್ತೆಗೆ ಬಳಸುವ ಅತ್ಯಂತ ದುಬಾರಿ ಪರೀಕ್ಷೆಗಳಾಗಿದ್ದು, ಆರ್ಥಿಕವಾಗಿ ದುರ್ಬಲವಾಗಿರುವ ಹಲವು ರೋಗಿಗಳಿಗೆ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ ಮತ್ತು ಹೆಚ್ಚಿನ ವೈದ್ಯಕೀಯ ತಪಾಸಣೆಗೆ ಒಳಗಾಗಲು ಸಾಧ್ಯವಾಗುವುದಿಲ್ಲ. ಇದರಿಂದ ರೋಗಿಗಳಲ್ಲಿ ರೋಗಪತ್ತೆ ತಡವಾಗುತ್ತದೆ. ಫಲಿತಾಂಶವಾಗಿ ರೋಗದ ಹೊರೆ ಹೆಚ್ಚುತ್ತದೆ ಮತ್ತು ಆರೋಗ್ಯದಲ್ಲಿ ಗಂಭೀರ ತೊಡಕುಗಳು ಕಾಣಿಸಿಕೊಳ್ಳುತ್ತವೆ. ಈ ಉಪಕ್ರಮದ ಮೂಲಕ, ಆಸ್ಟರ್ ಹಾಸ್ಪಿಟಲ್ಸ್ ಬೆಂಗಳೂರು ಅಂತಹ ರೋಗಿಗಳಿಗೆ ಆಸ್ಟರ್ ವಲಂಟಿಯರ್ಸ್‌ ಮುಖಾಂತರ ಉನ್ನತ ಮಟ್ಟದ ತಪಾಸಣೆಯ ಮೂಲಕ ಸೂಕ್ತ ರೋಗಪತ್ತೆ ಮತ್ತು ನಿಖರ ಚಿಕಿತ್ಸೆಗೆ ನೆರವಾಗಲಿದೆ.

ಯೋಜನೆಯನ್ನು ಶ್ಲಾಘಿಸಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ (ದೇವನಹಳ್ಳಿ) ಜಿಲ್ಲಾ ಆರೋಗ್ಯಾಧಿಕಾರಿ ಡಾ.ಮಂಜುಳಾ ದೇವಿ, “ಬೆಂಗಳೂರಿನ ಆಸ್ಟರ್ ಆಸ್ಪತ್ರೆಗಳು ಅಗತ್ಯವಿರುವ ರೋಗಿಗಳಿಗೆ ಉಚಿತ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್ ಒದಗಿಸುವ ಮೂಲಕ ಸಮಾಜವನ್ನು ಬೆಂಬಲಿಸುವ ಕ್ರಮ ಕೈಗೊಂಡಿರುವುದನ್ನು ನಾವು ಶ್ಲಾಘಿಸುತ್ತೇವೆ.  ಕೋವಿಡ್ 19 ಸಾಂಕ್ರಾಮಿಕವು ನಿಖರ ಪರೀಕ್ಷೆ ಮತ್ತು ರಿಪೋರ್ಟಿಂಗ್‌ನ ನಿರ್ಣಾಯಕ ಅಗತ್ಯತೆಯನ್ನು ತಿಳಿಸಿಕೊಟ್ಟಿದೆ, ಇದು ಸಾರ್ವಜನಿಕ ಆರೋಗ್ಯದಲ್ಲಿ ಅತ್ಯಂತ ಅಗತ್ಯವಾಗಿದೆ. ಆರಂಭದಲ್ಲೇ ರೋಗಗಳ ಪತ್ತೆ ಹಚ್ಚುವಿಕೆ, ಶೀಘ್ರ ಆರಂಭಿಕ ಚಿಕಿತ್ಸೆಗೆ ಸಹಕಾರಿಯಾಗುತ್ತದೆ, ಸಹಜವಾಗಿಯೇ ಇದರ ಫಲಿತಾಂಶ ಉತ್ತಮವಾಗಿರುತ್ತದೆ. ಆಸ್ಟರ್ ಆಸ್ಪತ್ರೆಯ ಈ ಉಪಕ್ರಮದಿಂದ, ದುಬಾರಿ ವೆಚ್ಚದಿಂದಾಗಿ  ಇಂತಹ ಪರೀಕ್ಷೆಗಳಿಂದ ಒಳಗಾಗಲು ಸಾಧ್ಯವಾಗದ ಮತ್ತು ಸಮಯೋಚಿತ ವೈದ್ಯಕೀಯ ಆರೈಕೆಯಿಂದ ವಂಚಿತವಾದ ಅದೆಷ್ಟೋ ಬಡವರಿಗೆ ಸಹಾಯವಾಗುತ್ತದೆ.''

“ಎಂಆರ್‌ಐಗಳು ಮತ್ತು ಸಿಟಿ ಸ್ಕ್ಯಾನ್‌ಗಳು ದುಬಾರಿ ರೋಗಪತ್ತೆ ಪರೀಕ್ಷೆಗಳಾಗಿದ್ದು, ಅದು ಸಾಮಾನ್ಯರಿಗೆ ದೊಡ್ಡ ಹೊರೆಯಾಗಬಹುದು. ಅವರ ಕೆಟ್ಟ ಆರ್ಥಿಕ ಮತ್ತು ಹಣಕಾಸು ಹಿನ್ನೆಲೆಯಿಂದಾಗಿ, ಅನೇಕರಿಗೆ ಈ ಅಗತ್ಯ ಪರೀಕ್ಷೆಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಗಮನಾರ್ಹ ಸೇವೆಯ ಭಾಗವಾಗಲು ನಾವು ಸಂತೋಷಪಡುತ್ತೇವೆ ಮತ್ತು ಈ ಉದಾತ್ತ ಯೋಜನೆಗಾಗಿ ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಧನ್ಯವಾದಗಳು. ಇದು ಅಗತ್ಯವಿರುವ ಅನೇಕ ರೋಗಿಗಳಿಗೆ ಉಚಿತ ಅತ್ಯಾಧುನಿಕ ತಪಾಸಣೆಯ ಜೊತೆಗೆ ಮತ್ತು ಸಮಯೋಚಿತ ಚಿಕಿತ್ಸೆಗೂ ಸಹಕಾರಿಯಾಗುತ್ತದೆ. ಇತರ ಖಾಸಗಿ ಆಸ್ಪತ್ರೆಗಳು ಕೂಡ ಅಗತ್ಯವಿರುವ ಜನರಿಗೆ ಸೂಕ್ತ ರೋಗಪತ್ತೆಗೆ ಸಹಾಯಮಾಡಲು ಮುಂದೆ ಬರುತ್ತವೆ ಎಂದು ನಾವು ಭಾವಿಸುತ್ತೇವೆ ”ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್‌ನ ಗೌರವ ಕಾರ್ಯದರ್ಶಿ ಎ.ವಿ.ಎಸ್. ಮೂರ್ತಿ ಹೇಳಿದರು.

ಉಪಕ್ರಮದ ಕುರಿತು ಮಾತನಾಡಿದ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್. ರಮೇಶ್ ಕುಮಾರ್, “ನಾವು ಈ ಯೋಜನೆಯನ್ನು ಮಾನವೀಯತೆಗೆ ನಮ್ಮ ಸೇವೆಯಾಗಿ ಪ್ರಾರಂಭಿಸಿದ್ದೇವೆ ಮತ್ತು ಅಗತ್ಯವಿರುವ ಜನರಿಗೆ ಅತ್ಯಂತ ಅಗತ್ಯವಾದ ವೈದ್ಯಕೀಯ ಚಿಕಿತ್ಸೆ ಮತ್ತು ಸೂಕ್ತ ರೋಗಪತ್ತೆಯ ಸವಲತ್ತು ಪಡೆಯಲು ಸಹಾಯ ಮಾಡುವ ನಮ್ಮ ಪ್ರಾಮಾಣಿಕ ಪ್ರಯತ್ನವಾಗಿದೆ. ನಮ್ಮ ಗ್ರೂಪ್‌ ಯಾವತ್ತೂ ಜನರಿಗೆ ಅತ್ಯಂತ ಗೌರವದಿಂದ ಚಿಕಿತ್ಸೆ ನೀಡುವುದು ಮತ್ತು ಅವರ ಕೊಡುಗೆಗಳ ಮೌಲ್ಯವನ್ನು ಅರಿಯುವುದರಲ್ಲಿ ನಂಬಿಕೆ ಇಟ್ಟಿದೆ. ಹೀಗಾಗಿ, ಈ ಉಪಕ್ರಮದಿಂದ ನಾವು ಸಮಾಜದ ಎಲ್ಲಾ ವರ್ಗದವರಿಗೆ ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಮತ್ತು ಆರೋಗ್ಯ ಸೇವೆಗಳ ಅಗತ್ಯವಿರುವವರಿಗೆ ಬೆಂಬಲ ನೀಡಲು ಸಾಧ್ಯವಾಗುತ್ತದೆ ಎಂದು ನಂಬಿದ್ದೇವೆ, ”ಎನ್ನುತ್ತಾರೆ.

ಯೋಜನೆ ಪ್ರಾರಂಭದ ಕುರಿತು ತಮ್ಮ ಚಿಂತನೆಗಳನ್ನು ಹಂಚಿಕೊಂಡ ಆಸ್ಟರ್ ಆರ್‌ವಿ ಆಸ್ಪತ್ರೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಪ್ರಶಾಂತ್ ಎನ್, “ಆರೋಗ್ಯ ಸೇವೆಗಳನ್ನು ಪಡೆದುಕೊಳ್ಳುವುದು ನಮ್ಮ ಗ್ರೂಪ್‌ಗೆ ಅತ್ಯಂತ ಪ್ರಮುಖ ವಿಚಾರ ಮತ್ತು ಅಂತಹ ಉಪಕ್ರಮಗಳ ಮೂಲಕ ನಾವು ಆರೋಗ್ಯ ಸೇವೆಗಳು ಮತ್ತು ಜನರ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿ ಹೊಂದಿದ್ದೇವೆ. ನಮ್ಮ ಈ ಕ್ರಮದಡಿಯಲ್ಲಿ, ರೋಗಿಗಳು ತಮ್ಮ ವೈದ್ಯರನ್ನು ಅಗತ್ಯಕ್ಕೆ ಅನುಗುಣವಾಗಿ ಆಯ್ಕೆ ಮಾಡಿಕೊಳ್ಳಬಹುದು ಮತ್ತು ರೋಗಪತ್ತೆಯ ಸ್ಕ್ಯಾನ್‌ಗಳಿಗೆ ಒಳಪಟ್ಟ ನಂತರ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವಿಲ್ಲ. ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ಮಾತ್ರ ಈ ಸೇವೆಗೆ ದೊರೆಯಲಿದೆ ಮತ್ತು ರೋಗಿಗಳು ನೋಂದಾಯಿತ ವೈದ್ಯರು (ಅಲೋಪತಿ) ನೀಡುವ ಸ್ಕ್ಯಾನ್‌ಗಳ ಶಿಫಾರಸು ಮತ್ತು ತಮ್ಮ ಆದಾಯದ ಪುರಾವೆಯಾಗಿ ದಾಖಲೆಗಳೊಂದಿಗೆ ಆಸ್ಪತ್ರೆಯನ್ನು ಸಂಪರ್ಕಿ ಸಬೇಕಾಗುತ್ತದೆ,” ಎಂದು ವಿವರಿಸಿದರು.

ವೈದ್ಯಕೀಯ ತಪಾಸಣೆಯ ವಿವರವಾದ ಪಟ್ಟಿಯನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆ ತನ್ನ ಆಸ್ಟರ್ ಫ್ರೀ ಇನ್ ವೆಬ್‌ಸೈಟ್‌ನಲ್ಲಿ ಅರ್ಜಿ ಪ್ರಕ್ರಿಯೆಯ ವಿವರಗಳೊಂದಿಗೆ ಒದಗಿಸಿದೆ. ತಪಾಸಣೆ ಪಡೆಯಲು ಬಯಸುವ ಯಾವುದೇ ರೋಗಿ ಬೆಂಗಳೂರಿನಲ್ಲಿ ಸೂಕ್ತ ಸೌಲಭ್ಯಕ್ಕಾಗಿ ಸಂಪರ್ಕಿಸಬಹುದು ಮತ್ತು ಪೂರಕ ದಾಖಲೆಗಳೊಂದಿಗೆ ವೆಬ್‌ಸೈಟ್‌ನಲ್ಲಿಯೂ ಅರ್ಜಿ ಸಲ್ಲಿಸಬಹುದು. ಇದೇ ಸಮಯದಲ್ಲಿ, ಅಗತ್ಯವಿರುವ ರೋಗಿಗಳನ್ನು ವೈದ್ಯರು (ಆಂತರಿಕ ಮತ್ತು ಬಾಹ್ಯ), ಎನ್‌ಜಿಒಗಳು, ಸಹಾಯಕ  ಗುಂಪುಗಳು, ವೈದ್ಯಕೀಯ ಕಾಲೇಜುಗಳು / ಅಧಿಕಾರಿಗಳು ಹತ್ತಿರದ ಆಸ್ಟರ್ ಘಟಕಕ್ಕೆ ಉಚಿತ ತಪಾಸಣೆಗಾಗಿ  ಶಿಫಾರಸು ಮಾಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News