​ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಅರ್ಜಿ ಆಹ್ವಾನ

Update: 2021-03-26 13:10 GMT

ಉಡುಪಿ, ಮಾ.26: ಪಶು ಪಾಲನಾ ಮೂಲಸೌಕರ್ಯ ನಿಧಿ ಅನುಷ್ಠಾನದ ಅಡಿಯಲ್ಲಿ, ಜಿಲ್ಲೆಯಲ್ಲಿ ಆಹಾರ ವಹಿವಾಟು ಉದ್ದಿಮೆದಾರರಿಗೆ ಪಶು ಸಂಗೋಪನಾ ವಲಯದ ಚಟುವಟಿಕೆಗಳಾದ ಡೈರಿ ಮತ್ತು ವೌಲ್ಯಾಧಾರಿತ ಡೈರಿ ಪದಾರ್ಥಗಳು, ಕುರಿ, ಮೇಕೆ, ಹಂದಿ, ಕೋಳಿಯ ಮೌಲ್ಯಾಧಾರಿತ ಮಾಂಸದ ಪದಾರ್ಥಗಳು, ಪಶು ಆಹಾರ ತಯಾರಿಕಾ ಘಟಕಗಳ ಸ್ಥಾಪನೆಗೆ ಉತ್ತೇಜನ ನೀಡಲು ಬ್ಯಾಂಕುಗಳಿಂದ ಹಣಕಾಸು ಸೌಲ್ಯ ಒದಗಿಸುವ ಬಗ್ಗೆ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದ್ದು, ಇದಕ್ಕಾಗಿ ವಿವಿಧ ವರ್ಗಗಳ ಫಲಾನುಭವಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್- www.ahidf.udyaminitra.in -ಅಥವಾ ಮುಖ್ಯ ಪಶುವೈದ್ಯಾಧಿಕಾರಿಗಳು (ಆಡಳಿತ), ಪಶು ಆಸ್ಪತ್ರೆ, ಉಡುಪಿ ದೂ.ಸಂ.0820-2520659, ಕಾಪು ದೂ.ಸಂಖ್ಯೆ:0820-2551175, ಬ್ರಹ್ಮಾವರ ದೂ.ಸಂಖ್ಯೆ:0820-2561101, ಕುಂದಾಪುರ ದೂ.ಸಂಖ್ಯೆ: 08254- 230776, ಬೈಂದೂರು ದೂ.ಸಂಖ್ಯೆ: 08254-251076, ಕಾರ್ಕಳ ದೂ.ಸಂಖ್ಯೆ: 08258-230448 ಹಾಗೂ ಹೆಬ್ರಿ ದೂ. ಸಂಖ್ಯೆ: 08253-251203 ಅನ್ನು ಸಂಪರ್ಕಿ ಸುವಂತೆ ಪಶು ಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News