ಲಾರಿಯಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ

Update: 2021-03-26 17:17 GMT

ಬೆಂಗಳೂರು, ಮಾ.26: ಕಟ್ಟಿದ್ದ ಗಾಂಜಾವನ್ನು ಲಾರಿಯಲ್ಲಿ ಸಾಗಿಸುತ್ತಿದ್ದ 1ಕೋಟಿ ಮೌಲ್ಯದ 500 ಕೆಜಿ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ವೈಟ್‍ಫೀಲ್ಡ್ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ.

ಶುಕ್ರವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ರಾಜಸ್ತಾನದ ಜೋಧ್‍ಪುರ ಜಿಲ್ಲೆಯ ದಯಾಳ್‍ರಾಮ್(38), ಪೂನಾರಾಮ್(24), ಬುದ್ಧರಾಮ್(23)ನನ್ನು ಬಂಧಿಸಲಾಗಿದೆ ಎಂದರು.

ಬಂಧಿತ ಆರೋಪಿಗಳಿಂದ 1 ಕೋಟಿ ಮೌಲ್ಯದ 82 ಬಂಡಲ್‍ಗಳಲ್ಲಿ ಕಟ್ಟಿದ್ದ 500 ಕೆಜಿ ಗಾಂಜಾ ಹಾಗೂ ಲಾರಿಯನ್ನು ವಶಪಡಿಸಿಕೊಂಡು ಕೆಆರ್ ಪುರಂ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಹೊಸಕೇಟೆ ಹಳೆ ಮದ್ರಾಸ್ ರಸ್ತೆಯ ಮೂಲಕ ಕೆಆರ್ ಪುರ ಮೇಡಹಳ್ಳಿ ಕಡೆಗೆ ಅನುಮಾನಾಸ್ಪದವಾಗಿ ಹೋಗುತ್ತಿದ್ದ 10 ಚಕ್ರಗಳ ಲಾರಿಯನ್ನು ಕೆಆರ್ ಪುರ ಪೊಲೀಸರು ಸೂಕ್ಷ್ಮವಾಗಿ ತಪಾಸಣೆ ಕೈಗೊಂಡರು. ತಪಾಸಣೆಯಲ್ಲಿ ಚಾಲಕನ ಹಿಂಭಾಗದ ಕ್ಯಾಬಿನ್‍ನಲ್ಲಿ ಬಂಡಲ್‍ಗಳಲ್ಲಿ ಕಟ್ಟಿದ್ದ ಗಾಂಜಾ ಪತ್ತೆಯಾಗಿದೆ ಎಂದರು.

ಗಾಂಜಾವನ್ನು ಪತ್ತೆ ಮಾಡುವಾಗ ಗ್ರಾಹಕರ ಸೋಗಿನಲ್ಲಿ ಗಾಂಜಾ ಖರೀದಿ ಮಾಡುವ ನೆಪ ಮಾಡಿ ಕೆಆರ್ ಪುರಂನ ಟಿನ್ ಫ್ಯಾಕ್ಟರಿ ಕಡೆ ಬರುವಂತೆ ತಿಳಿಸಿ ಹಣವಿದ್ದ ಸೂಟ್‍ಕೇಸ್ ತೋರಿಸಿ ನಂಬಿಸಿ ಕಾರ್ಯಾಚರಣಿ ಕೈಗೊಳ್ಳಲಾಯಿತು ಎಂದು ತಿಳಿಸಿದರು.

ಆರೋಪಿಗಳು ಒರಿಸ್ಸಾದಿಂದ ಗಾಂಜಾವನ್ನು ಖರೀದಿಸಿಕೊಂಡು ಬಂದು ನಗರ ಸೇರಿದಂತೆ ಬೇರೆ ಕಡೆಯಲ್ಲಿ ಮಾರಾಟ ಮಾಡಲು ವ್ಯವಸ್ಥಿತ ಜಾಲ ಸೃಷ್ಟಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಆಯುಕ್ತರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News