ಯಾವುದೆ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಕಾನೂನುಬದ್ಧ ತನಿಖೆ: ಸಚಿವ ಬೊಮ್ಮಾಯಿ
Update: 2021-03-27 11:15 IST
ಬೆಂಗಳೂರು, ಮಾ.27: ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣವನ್ನು ವಿಶೇಷ ತನಿಖಾ ತಂಡ(ಎಸ್.ಐ.ಟಿ.)ವು ಯಾವುದೆ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಕಾನೂನು ಬದ್ಧವಾಗಿ ತನಿಖೆ ನಡೆಸುತ್ತಿದೆ ಎಂದು ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಬಿಡುಗಡೆ ಪ್ರಕರಣಕ್ಕೆ ಸಂಬಂಧಿಸಿ ಸರಣಿ ವೀಡಿಯೊ, ಆಡಿಯೋಗಳು ಬಿಡುಗಡೆಯಾಗುತ್ತಿವೆ. ಸಿಡಿ, ಆಡಿಯೋ ಹಾಗೂ ವೀಡಿಯೋ ಈ ಮೂರಕ್ಕೆ ಸಂಬಂಧಿಸಿ ಎಸ್.ಐ.ಟಿ. ಕೂಲಂಕಷವಾಗಿ ತನಿಖೆ ನಡೆಸುತ್ತಿದೆ. ವೈಜ್ಞಾನಿಕವಾಗಿಯೂ ಇವುಗಳ ಪರಿಶೀಲನೆ ನಡೆಯುತ್ತಿದೆ. ಅದರಲ್ಲಿನ ಸತ್ಯಾಸತ್ಯತೆಯನ್ನು ಅರಿತು ಆ ನಿಟ್ಟಿನಲ್ಲಿ ತನಿಖೆ ಮುಂದುವರಿಯಲಿದೆ ಎಂದರು.
ಎಸ್.ಐ.ಟಿ. ಯಾವುದೇ ರೀತಿಯ ಒತ್ತಡ, ಪ್ರಭಾವಕ್ಕೆ ಒಳಗಾಗದೆ ಯಾರ ಪರವಾಗಿಯೂ ಇರದೆ ಕ್ರಮಬದ್ಧವಾಗಿ, ಕಾನೂನು ಪ್ರಕಾರ ತನಿಖೆ ನಡೆಸುತ್ತಿದ್ದು, ಅದು ಮುಂದುವರಿಯಲಿದೆ ಎಂದು ಗೃಹಸಚಿವರು ಹೇಳಿದರು.