ಬೆಂಗಳೂರು ನಾಗರಿಕರಿಗೆ ತೆರಿಗೆ ವಿನಾಯಿತಿ ನೀಡಿದ ಬಿಬಿಎಂಪಿ
ಬೆಂಗಳೂರು, ಮಾ.27: ಬಿಬಿಎಂಪಿಯು 2021-22ನೇ ಸಾಲಿಗೆ 9,287.81 ಕೋಟಿ ರೂ. ವೆಚ್ಚದ ಬಜೆಟ್ ನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ತುಳಸಿ ಮದ್ದಿನೇನಿ ಶನಿವಾರ ಬೆಳಗ್ಗೆ ಮಂಡಿಸಿದರು.
ಒಟ್ಟು 9,287.81 ಕೋಟಿ ರೂ. ಆದಾಯ ನಿರೀಕ್ಷಿಸಿ ಹಾಗೂ 9,286.86 ಕೋಟಿ ರೂ.ವೆಚ್ಚವನ್ನು ಅಂದಾಜಿಸಿ ಆಯವ್ಯಯ ಮಂಡಿಸಿದ ಅವರು, ಯಾವುದೇ ರೀತಿಯ ತೆರಿಗೆ ಹೆಚ್ಚಳ ಹಾಗೂ ಹೊಸ ತೆರಿಗೆ ವಿಧಿಸಿಲ್ಲವೆಂದು ತಿಳಿಸಿದ್ದಾರೆ.
ಬಜೆಟ್ ಮುಖ್ಯಾಂಶಗಳು...
-ವಲಯಗಳು, ವಿಧಾನಸಭಾ ಕ್ಷೇತ್ರ ಗಾಗೂ ವಾರ್ಡ್‌ಗಳ ಆಡಳಿತ ವಿಕೇಂದ್ರೀಕರಣಕ್ಕೆ ಆದ್ಯತೆ ನೀಡಲಾಗಿದೆ. ಇದಕ್ಕಾಗಿ 2 ಸಾವಿರ ಕೋಟಿ ರೂ. ಹಂಚಿಕೆ ಮಾಡಲಾಗಿದೆ.
-ಆಸ್ತಿ ತೆರಿಗೆ ಸಂಗ್ರಹ ಉತ್ತೇಜನಕ್ಕೆ ಆಯಾ ವಾರ್ಡ್‌ನಲ್ಲಿ ಸಂಗ್ರಹವಾಗುವ ಶೇ.1ರಷ್ಟು ಅನುದಾನ ಅದೇ ವಾರ್ಡ್‌ಗೆ ಮೀಸಲು.
- ಕಸದ ರಾಶಿ ಕಂಡುಬಾರದ ವಾರ್ಡ್‌ಗೆ 50 ಲಕ್ಷ ರೂ. ಪ್ರೋತ್ಸಾಹಧನ. ಪಾಲಿಕೆಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳ ರಸ್ತೆಯ ಅಭಿವೃದ್ಧಿಗೆ 1000 ಕೋಟಿ ರೂ. ಮೀಸಲು.
-ಇ– ಆಸ್ತಿ ತಂತ್ರಾಂಶವನ್ನು ಎಲ್ಲ ವಾರ್ಡ್ ಗಳಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ, ಬೀದಿನಾಯಿ ಹಾವಳಿ ತಡೆಗೆ 5 ಕೋಟಿ ರೂ. ಮೀಸಲು, ಆಸ್ತಿಗೆ ಸಂಬಂಧಿಸಿ ಬಿ– ಖಾತಾ ನಿರ್ವಹಣೆ ರದ್ದುಪಡಿಸಿ ಎ–ಖಾತಾ ಮಾತ್ರ ನಿರ್ವಹಿಸಲು ತೀರ್ಮಾನ.
-ಪಾದಾಚಾರಿ ಮಾರ್ಗ ದುರಸ್ತಿಗೆ ಪ್ರತಿ ವಾರ್ಡ್‌ಗೆ 20 ಲಕ್ಷ ರೂ. ಒದಗಿಸಲಾಗಿದೆ, ಉದ್ಯಾನವನ ನಿರ್ವಹಣೆಗೆ ಹಾಗೂ ಪರಿಸರ ನಿರ್ವಹಣೆಗೆ 214 ಕೋಟಿ ರೂ. ಮೀಸಲು
- ಅರಣ್ಯ ಇಲಾಖೆಗೆ 39 ಕೋಟಿ ರೂ. ನೀಡಲಾಗಿದೆ. ಹಸಿರು ಸೂಚ್ಯಂಕ ಹೆಚ್ಚಳ 10 ಲಕ್ಷ ಸಸಿ ನೆಡುವ ಗುರಿ, ರಾಜಕಾಲುವೆ ಹೂಳೆತ್ತಿ ನಿರ್ವಹಣೆಗೆ 60 ಕೋಟಿ ರೂ. ಒದಗಿಸಲಾಗಿದೆ.