ಸಿಡಿ ಪ್ರಕರಣ : ಯುವತಿಯ ವಿಚಾರಣೆಗೆ ಕೋರಿ ತನಿಖಾಧಿಕಾರಿಯಿಂದ ನ್ಯಾಯಾಲಯಕ್ಕೆ ಅರ್ಜಿ
Update: 2021-03-30 13:15 IST
ಬೆಂಗಳೂರು: ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿ ಯುವತಿಯನ್ನು ವಿಚಾರಣೆ ನಡೆಸಲು ಕೋರಿ ತನಿಖಾಧಿಕಾರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯದಲ್ಲಿ ಯುವತಿಯ ಹೇಳಿಕೆ ದಾಖಲಿಸಲು ಕೋರಿ, ಯುವತಿ ಪರ ವಕೀಲ ಕೆ.ಎನ್. ಜಗದೀಶ್ ಕುಮಾರ್ ಅರ್ಜಿ ಸಲ್ಲಿಸಿದ್ದರು. ಅದನ್ನು ಎಸಿಎಂಎಂ ನ್ಯಾಯಾಲಯ ಅಂಗೀಕರಿಸಿದೆ. ಇದೀಗ ಉಪ ರಿಜಿಸ್ಟ್ರಾರ್ ಮೂಲಕ ತನಿಖಾಧಿಕಾರಿ ಪ್ರಕರಣ ಸಂಬಂಧ ಅರ್ಜಿ ಸಲ್ಲಿಸಿದ್ದಾರೆ.
'ಪ್ರಕರಣ ದಾಖಲಾದ ದಿನದಿಂದ ಯುವತಿ ಸಿಕ್ಕಿಲ್ಲ. ನೇರವಾಗಿ ಹೇಳಿಕೆಯನ್ನೂ ಕೊಟ್ಟಿಲ್ಲ. ಹೇಳಿಕೆ ಪಡೆಯಲು ಸಾಕಷ್ಟು ಬಾರಿ ಯತ್ನಿಸಿದರೂ ಯುವತಿ ಸಿಗಲಿಲ್ಲ' ಎಂದೂ ತನಿಖಾಧಿಕಾರಿ ಎಂ.ಸಿ. ಕವಿತಾ ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ.