×
Ad

ಸಿ.ಡಿ. ಪ್ರಕರಣ: 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಯುವತಿ ಹಾಜರು

Update: 2021-03-30 15:26 IST

ಬೆಂಗಳೂರು : ಸಿ.ಡಿ. ಪ್ರಕರಣದ ಯುವತಿ 24ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿದುಬಂದಿದ್ದು, ಹೇಳಿಕೆ ದಾಖಲು ಪ್ರಕ್ರಿಯೆ ಆರಂಭವಾಗಿದೆ.

ಕಾರಿನಲ್ಲಿ ಯುವತಿಯನ್ನು ನ್ಯಾಯಾಲಯ ಬಳಿ‌ ಕರೆತರಲಾಗಿದ್ದು, ನಂತರ ನಡೆದುಕೊಂಡು ಯುವತಿ‌ ನ್ಯಾಯಾಲಯದೊಳಗೆ ಹೋಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಯುವತಿ ನ್ಯಾಯಾಲಯದೊಳಗೆ ಇದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾತನಾಡಿದ ಯುವತಿ‌ ಪರ‌ ವಕೀಲ ಕೆ.ಎನ್. ಜಗದೀಶ್ ‌ಕುಮಾರ್, ‘ಯುವತಿ ನ್ಯಾಯಾಲಯದಲ್ಲಿ‌ ಇದ್ದಾರೆ. 3 ಗಂಟೆಯ ಸುಮಾರಿಗೆ ಕಲಾಪ‌ ಆರಂಭವಾಗಿದ್ದು, ನ್ಯಾಯಾಧೀಶರೇ ಹೇಳಿಕೆ ದಾಖಲು ಮಾಡಿಕೊಳ್ಳಲಿದ್ದಾರೆ’ ಎಂದರು.

‘ಯುವತಿ‌ ಮಾನಸಿಕವಾಗಿ ಆರೋಗ್ಯವಾಗಿದ್ದಾರೆ. ತಮಗಾದ ಅನ್ಯಾಯವನ್ನು ನ್ಯಾಯಾಲಯದ ಮುಂದೆ ಹೇಳಲಿದ್ದಾರೆ’ ಎಂದೂ ತಿಳಿಸಿದರು. 

ಈ ನಡುವೆ, ಯುವತಿ ಇರುವಲ್ಲಿಗೇ ನ್ಯಾಯಾಧೀಶರು ಮತ್ತು ಟೈಪಿಸ್ಟ್‌ ತೆರಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News